ಪ್ರೆಸಿಡೆನ್ಸಿ ವಿವಿ ಕುಲಪತಿ ನಿಸಾರ್ ಅಹ್ಮದ್‌ರಿಗೆ ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪ್ರದಾನ
Update: 2023-07-10 12:32 IST
ಬೆಂಗಳೂರು: ಪ್ರೆಸಿಡೆನ್ಸಿ ವಿವಿ ಕುಲಪತಿ ಹಾಗೂ ಪ್ರೆಸಿಡೆನ್ಸಿ ಶಿಕ್ಷಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಮಂಗಳೂರು ಮೂಲದ ನಿಸಾರ್ ಅಹ್ಮದ್ ಸೇರಿ ಮೂವರಿಗೆ ಬೆಂಗಳೂರು ನಗರ ವಿವಿಯ 2ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಸೋಮವಾರ ವಿಶ್ವವಿದ್ಯಾನಿಲಯದ 'ಜ್ಞಾನಜ್ಯೋತಿ' ಸಭಾಂಗಣದಲ್ಲಿ ನಿಸಾರ್ ಅಹ್ಮದ್, ವೂಡೆ ಪಿ ಕೃಷ್ಣ, ತರಾಣಿ ಚಿದಾನಂದ ಅವರಿಗೆ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಖ್ಯಾತ ಹೃದ್ರೋಗ ತಜ್ಞರು ಮತ್ತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್, ಬೆಂಗಳೂರು ನಗರ ವಿವಿ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಉಪಸ್ಥಿತರಿದ್ದರು.