×
Ad

ಈಗಿನ ಸಮಸ್ಯೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ‌ಕಾರಣ: ಸಚಿವ ‌ರಾಮಲಿಂಗಾ ರೆಡ್ಡಿ‌

Update: 2023-12-15 11:46 IST

ಬೆಳಗಾವಿ:  ವಿದ್ಯಾರ್ಥಿಗಳಿಗೆ ‌ಬಸ್ ಸಮಸ್ಯೆ ಕುರಿತು ಬಿ.ವೈ ವಿಜಯೇಂದ್ರ‌ ಅವರ ಪೋಸ್ಟ್ ‌ವಿಚಾರಕ್ಕೆ ಸಂಬಂಧಿಸಿ ಸಾರಿಗೆ ಸಚಿವ ‌ರಾಮಲಿಂಗಾರೆಡ್ಡಿ‌ ಪ್ರತಿಕ್ರಿಯಿಸಿದ್ದಾರೆ.

ಸುವರ್ಣ ಸೌಧದಲ್ಲಿ ಮಾತನಾಡಿದ ಅವರು,  ವಿಜಯೇಂದ್ರ‌ ಅವರು ತುಮಕೂರಿನ ವಿದ್ಯಾರ್ಥಿಗಳ‌ ಬಸ್ ಸಮಸ್ಯೆ‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಶಾಲಾಮಕ್ಕಳಿಗೆ ತೊಂದರೆ ಆಗದಂತೆ‌ ನೋಡಿಕೊಳ್ಳುತ್ತೇವೆ. ಜನವರಿ,ಫೆಬ್ರವರಿಯಲ್ಲಿ‌ ಹೊಸ‌ಬಸ್ ಗಳು ಬರಲಿವೆ. ಜೊತೆಗೆ ಡ್ರೈವರ್, ಕಂಡಕ್ಟರ್ ಗಳ ನೇಮಕಾತಿ ಕೂಡ‌ ಆಗಲಿದೆ ಎಂದು ತಿಳಿಸಿದರು.

ಈಗಿನ ಸಮಸ್ಯೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ‌ಕಾರಣ. ಹಿಂದೆ ‌ನೇಮಕಾತಿ ಮಾಡಿರಲಿಲ್ಲ. ಈಗ 9 ಸಾವಿರ ನೇಮಕಾತಿ ‌ಮಾಡಿಕೊಳ್ಳುತ್ತಿದ್ದೇವೆ. ಎರಡು ತಿಂಗಳಲ್ಲಿ ಈಗಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಮ್ಮ ಸರ್ಕಾರವನ್ನು ‌ದೂಷಿಸೋದು ಹಾಸ್ಯಾಸ್ಪದ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News