ಪ್ರವಾದಿ ಮುಹಮ್ಮದ್(ಸ) ಅವರು ಮಹಾನ್ ಮಾನವತಾವಾದಿ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಪ್ರವಾದಿ ಮುಹಮ್ಮದ್(ಸ) ಅವರು ಮಹಾನ್ ಮಾನವತಾವಾದಿ. ಎಲ್ಲ ಸಮುದಾಯಗಳಿಗೂ ಸಮಾನತೆ ಸಿಗಬೇಕು, ನೊಂದು, ಬೆಂದು, ಹಸಿದವರಿಗೆ ಉತ್ತಮವಾದ ಬದಕು ಕಟ್ಟಿಕೊಡಲು ನೆರವು ನೀಡಬೇಕೆಂಬ ಸಂದೇಶ ಕೊಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಬೆಂಗಳೂರಿನ ಜಂಟಿ ಮೀಲಾದ್ ಸಮಿತಿ ಆಶ್ರಯದಲ್ಲಿ ನಡೆದ ಅಂತರ್ ರಾಷ್ಟ್ರೀಯ ಮೀಲಾದ್ದುನ್ನಬಿ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ಐಕ್ಯತೆ, ಸಮಗ್ರತೆ, ಶಾಂತಿಯನ್ನು ಕಾಪಾಡಿಕೊಂಡು ಹೋಗಬೇಕು. ಮಹಾನ್ ಮನವತಾವಾದಿ ಪೈಗಂಬರ್ ಅವರನ್ನು ಹೊಗಳಿದರೆ ಸಾಲದು. ಸಮ ಸಮಾಜ ನಿರ್ಮಾಣಕ್ಕೆ ಮಾವನ ಕುಲಕ್ಕೆ ನೀಡಿರುವ ಮಾರ್ಗದರ್ಶನವನ್ನು ಅನುಸರಿಸಬೇಕಿದೆ ಎಂದು ಅವರು ಕರೆ ನೀಡಿದರು.
ನೀವು ಅಲ್ಪಸಂಖ್ಯಾತರು ಎಂಬ ಭಾವನೆ ಬೇಡ. ನೀವು ಅಲ್ಪಸಂಖ್ಯಾತರಲ್ಲ. ಈ ದೇಶದಲ್ಲಿ ಹುಟ್ಟಿದ ಎಲ್ಲರೂ ಸಮಾನತೆಯಿಂದ ಬಾಳಬೇಕು. ನೀವು ಯಾವುದರಲ್ಲೂ ಕಡಿಮೆ ಇಲ್ಲ. ನಿಮ್ಮಲ್ಲಿ ಇಂಜಿನಿಯರ್, ವೈದ್ಯರು, ಸಿಎಗಳು ಇದ್ದಾರೆ. ಈ ದೇಶಕ್ಕೆ ಏನು ಶಕ್ತಿ ತುಂಬಬೇಕೋ ಆ ಶಕ್ತಿ ನಿಮ್ಮಲ್ಲಿದೆ ಎಂದು ಅವರು ಹೇಳಿದರು.
ದೇಶದ ನಾಲ್ಕು ಆಧಾರ ಸ್ತಂಭಳೆಂದರೆ ಶಿಕ್ಷಕ, ಕಾರ್ಮಿಕ, ಸೈನಿಕ, ಕೃಷಿಕ. ಇವತ್ತು ನಾವು ಶಿಕ್ಷಕರ ದಿನಾಚರಣೆ ಆಚರಿಸುತ್ತಿದ್ದೇವೆ. ಇಡೀ ಸರಕಾರ ಹಾಗೂ ಕಾಂಗ್ರೆಸ್ ಪಕ್ಷ. ನಿಮ್ಮ ಜೊತೆ ಇದೆ. ನಿಮ್ಮನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.