ಕಾರು ಅಪಘಾತದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮೃತ್ಯು
Update: 2023-07-24 20:40 IST
ಸಕಲೇಶಪುರ: ರಸ್ತೆ ಅಪಘಾತದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್ ಸೋಮವಾರ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪದಲ್ಲಿ ಉದಯಪುರ ಬಳಿ ಇಂದು ಸಂಜೆ ವೇಳೆ ಅವರ ಕಾರಿಗೆ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡು ಮೋಹನ್ ಕುಮಾರ್ ರವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯ ಮೃಪಟ್ಟಿದ್ದಾರೆ ಎಂದು ತಿಳಿದು ಬಮದಿದೆ.
ಮೋಹನ್ ಕುಮಾರ್ ಅವರ ಮೃತದೇಹವನ್ನು ಹಾಸನದ ಸ್ಪರ್ಶ ಆಸ್ಪತ್ರೆಯಲ್ಲಿ ಇರಿಸಲಾಗಿದೆ.