ಲೈಂಗಿಕ ದೌರ್ಜನ್ಯ ಆರೋಪ | ರ‍್ಯಾಪರ್ ವೇಡನ್ ವಿರುದ್ಧ ಮತ್ತಿಬ್ಬರು ಮಹಿಳೆಯರಿಂದ ಕೇರಳ ಸಿಎಂಗೆ ದೂರು
ರ‍್ಯಾಪರ್ ವೇಡನ್ (Photo: NDTV)
ತಿರುವನಂತಪುರಂ : ಅತ್ಯಾಚಾರ ಆರೋಪ ಎದುರಿಸುತ್ತಿರುವ ಖ್ಯಾತ ರ‍್ಯಾಪರ್ ವೇಡನ್ (ಹಿರಂದಾಸ್ ಮುರಳಿ) ವಿರುದ್ಧ ಮತ್ತಿಬ್ಬರು ಮಹಿಳೆಯರು ಲೈಂಗಿಕ ದೌರ್ಜನ್ಯ ಆರೋಪಿಸಿ ಕೇರಳ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.
ವೇಡನ್ ಎಂದೇ ಖ್ಯಾತರಾದ ಹಿರಂದಾಸ್ ಮುರಳಿ 2020ರಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಇಬ್ಬರು ಮಹಿಳೆಯರು ಇಮೇಲ್ ಮೂಲಕ ಸಿಎಂ ಕಚೇರಿಗೆ ದೂರು ನೀಡಿದ್ದಾರೆ.
“ನಾನು ಸಂಶೋಧನೆಯ ಭಾಗವಾಗಿ ವೇಡನ್ ಅವರನ್ನು ಸಂಪರ್ಕಿಸಿದ್ದೆ, ಅವರು 2020ರ ಡಿಸೆಂಬರ್ 20ರಂದು ಒಂದು ಕೊಠಡಿಯಲ್ಲಿ ನನಗೆ ಲೈಂಗಿಕ ಕಿರಕುಳ ನೀಡಿದರು. ಆದರೆ ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ” ಎಂದು ಓರ್ವ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೋರ್ವ ಮಹಿಳೆ ತನ್ನ ದೂರಿನಲ್ಲಿ “ವೇಡನ್ ಅವರನ್ನು ನಾನು ನನ್ನ ಸ್ನೇಹಿತನ ಮನೆಯಲ್ಲಿ ಭೇಟಿಯಾದೆ. ವೇಡನ್ ಅವರ ರಾಜಕೀಯ ನಿಲುವು ಮತ್ತು ಹಾಡುಗಳಿಂದ ಆಕರ್ಷಿತಳಾಗಿ ಅವರ ಜೊತೆ ಸಂಪರ್ಕದಲ್ಲಿದ್ದೆ, ಆ ಬಳಿಕ ಅವರು ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ" ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ತ್ರಿಕ್ಕಾಕರ ಪೊಲೀಸ್ ಠಾಣೆಯಲ್ಲಿ ವೈದ್ಯೆಯೋರ್ವರು ವೇಡನ್ ವಿರುದ್ಧ ಅತ್ಯಾಚಾರ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಇದೀಗ ಇತ್ತೆ ಇಬ್ಬರು ಮಹಿಳೆಯರು ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಿಸಿದ್ದಾರೆ.