×
Ad

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನ ಬಿಡುಗಡೆ

Update: 2024-02-28 23:16 IST

ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆರ್ಥಿಕ ಇಲಾಖೆಯು ಅನುದಾನವನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರುಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿವರಗಳನ್ನು ಪಡೆದು ಲೆಕ್ಕ ಶೀರ್ಷಿಕೆಯಡಿ ಆಡಳಿತಾತ್ಮಕ ಅನುಮೋದನೆ ನೀಡಿ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ವಹಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಶಾಸಕರುಗಳಾದ ಯು.ಬಿ.ಬಣಕಾರ 4 ಕೋಟಿ ರೂ., ಎನ್.ಎಚ್.ಕೋನರೆಡ್ಡಿ 1 ಕೋಟಿ ರೂ., ಗಣೇಶಪ್ರಕಾಶ ಹುಕ್ಕೇರಿ 2 ಕೋಟಿ ರೂ., ಆರ್.ವಿ.ದೇಶಪಾಂಡೆ 4 ಕೋಟಿ ರೂ., ಬಸವರಾಜು ವಿ.ಶಿವಗಂಗಾ 2 ಕೋಟಿ ರೂ., ಶಿವಾನಂದ ಎಸ್ ಪಾಟೀಲ್ 2.50 ಕೋಟಿ ರೂ., ಯಶವಂತರಾಯಗೌಡ 1.75 ಕೋಟಿ ರೂ., ಅಪ್ಪಾಜಿ ಸಿ.ಎಸ್.ನಾಡಗೌಡ 1.50 ಕೋಟಿ ರೂ., ಅಶೋಕ್ ಎಂ.ಮನಗೂಳಿ 2.35 ಕೋಟಿ ರೂ., ಬಸವರಾಜ್ ನೀಲಪ್ಪ ಶಿವಣ್ಣನವರ್ 80 ಲಕ್ಷ ರೂ., ಮಧು ಬಂಗಾರಪ್ಪ 3 ಕೋಟಿ ರೂ., ಅಜಯ್ ಧರಂಸಿAಗ್ 7.50 ಕೋಟಿ ರೂ., ರಹೀಂಖಾನ್ 2 ಕೋಟಿ ರೂ., ಎ.ಆರ್.ಕೃಷ್ಣಮೂರ್ತಿ 2 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News