×
Ad

"ತಪ್ಪಾಗಿ ಮಾತನಾಡುವುದು ಸರಿಯಲ್ಲ" : ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ

Update: 2025-01-22 21:14 IST

ರೇಣುಕಾಚಾರ್ಯ/ಬಿ.ಪಿ.ಹರೀಶ್

ಬೆಂಗಳೂರು: ಈ ಹಿಂದೆ ದಾವಣಗೆರೆಯಲ್ಲಿ ಹೀನಾಯವಾಗಿ ಸೋತಾಗ ಪ್ರತಿದಿನ ನಮ್ಮ ಮನೆಗೆ ಬರುತ್ತಿದ್ದ ಬಿ.ಪಿ.ಹರೀಶ್‍ನ ಎಲ್ಲ ಕೆಲಸಗಳನ್ನು ನಾನೇ ಮಾಡಿಸಿಕೊಟ್ಟೆ. ಇದೀಗ ಆತ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿದ್ದಾನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಪ್ತ ಶಾಸಕ ಬಿ.ಪಿ.ಹರೀಶ್ ‘ರೇಣುಕಾಚಾರ್ಯ ಹೆಸರು ಹೇಳಲು ಅಸಹ್ಯ ಆಗುತ್ತದೆ’ ಎಂಬ ಹೇಳಿಕೆ ವಿಚಾರವಾಗಿ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ ಎಂ.ಪಿ.ರೇಣುಕಾಚಾರ್ಯ, ‘ಬಿ.ಪಿ.ಹರೀಶ್ ಏನು ಮರ್ಯಾದಾ ಪುರುಷನೇ?’ ಎಂದು ಪ್ರಶ್ನಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹರೀಶ್ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಾಗ ನಾನು ಭರ್ಜರಿ ಭಾಷಣ ಮಾಡಿ ಅವರನ್ನು ಗೆಲ್ಲಿಸಿ ಅಂದಿದ್ದೆ. ಅದರ ವಿಡಿಯೋ ಇದೆ. ಅವತ್ತು ನಿನ್ನ ಹುಟ್ಟುಹಬ್ಬಕ್ಕೆ ಯಾಕೆ ಆಹ್ವಾನಿಸಿದ್ದೆ? ಗಣೇಶೋತ್ಸವಕ್ಕೆ ಏಕೆ ಕರೆದಿದ್ದೆ? ಎಂದು ಎಂ.ಪಿ.ರೇಣುಕಾಚಾರ್ಯ ಕೇಳಿದರು.

ಹರೀಶ್‍ಗೆ ನಿಗಮಗಳ ವರ್ಗಾವಣೆ ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಿಸಿಕೊಟ್ಟಿದ್ದೇನೆ. ಹೀಗಿದ್ದರೂ ತಪ್ಪಾಗಿ ಮಾತನಾಡುವುದು ಸರಿಯಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News