ಆರ್‌ಟಿಇ: ಎರಡನೇ ಸುತ್ತಿನ ಲಾಟರಿಯಲ್ಲಿ 921 ಮಕ್ಕಳು ಆಯ್ಕೆ
Update: 2025-06-16 22:35 IST
ಸಾಂದರ್ಭಿಕ ಚಿತ್ರ (Grok)
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ (RTE) ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಉಚಿತ ಪ್ರವೇಶಕ್ಕಾಗಿ 7,328 ಮಕ್ಕಳನ್ನು ಎರಡನೇ ಸುತ್ತಿನ ಲಾಟರಿಗೆ ಪರಿಗಣಿಸಿದ್ದು, ಸೋಮವಾರದಂದು ನಡೆದ ಆನ್‍ಲೈನ್ ಲಾಟರಿ ಪ್ರಕ್ರಿಯೆಯಲ್ಲಿ 921 ಮಕ್ಕಳು ಆಯ್ಕೆಯಾಗಿದ್ದಾರೆ.
ಈ ಎರಡನೇ ಸುತ್ತಿನ ಲಾಟರಿ ಪುಕ್ರಿಯೆಯಲ್ಲಿ ಆಯ್ಕೆಯಾದ ಮಕ್ಕಳ ಪೋಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ಸೀಟು ಹಂಚಿಕೆ ಮಾಹಿತಿಯನ್ನು ನೀಡಲಾಗಿದೆ. ಸಂಬಂಧಿಸಿದ ಪೋಷಕರು ಜೂ.21ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ದಾಖಲಾತಿ ಮಾಡಲು ತಿಳಿಸಿದೆ.
ಸೀಟು ಹಂಚಿಕೆ ವಿವರ ಇಲಾಖಾ ವೆಬ್‍ಸೈಟ್ www.schooleducation.karnataka.gov.in ನಲ್ಲಿ ಪ್ರಕಟಿಸಲಾಗಿದೆ.