×
Ad

ಎಸ್.ಎ.ಅಹ್ಮದ್ ಸೇರಿ 15 ಜನ ವಕೀಲರು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ

Update: 2023-07-03 23:22 IST

ಎಸ್.ಎ.ಅಹ್ಮದ್

ಬೆಂಗಳೂರು, ಜು.3: ರಾಜ್ಯ ಹೈಕೋರ್ಟ್ ಗೆ ಎಸ್.ಎ.ಅಹ್ಮದ್, ಪ್ರತಿಮಾ ಹೊನ್ನಾಪುರ, ಎಸ್.ಇಸ್ಮಾಯಿಲ್ ಜಬೀವುಲ್ಲಾ ಸೇರಿ 15 ಜನ ವಕೀಲರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಿಸಿ ಕಾನೂನು ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಬೆಂಗಳೂರು ಪೀಠಕ್ಕೆ ಎಸ್.ಇಸ್ಮಾಯಿಲ್ ಜಬೀವುಲ್ಲಾ, ಎಸ್.ಎ.ಅಹ್ಮದ್, ಪ್ರತಿಮಾ ಹೊನ್ನಾಪುರ, ವಿಕ್ರಮ್ ಹುಯಿಲ್‌ಗೋಳ್, ಕೆಂಪಣ್ಣ, ಸಂತೋಷ್ ಎಸ್. ಗೋಗಿ, ಸಿ.ಎಸ್.ಪ್ರದೀಪ್, ರೊಬೆನ್ ಜಾಕೋಬ್, ವಿ.ಜಿ.ಭಾನುಪ್ರಕಾಶ್, ಕಿರಣ್ ರೋಣ ಅವರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಲಾಗಿದೆ.

ಧಾರವಾಡ ಪೀಠಕ್ಕೆ ಗಂಗಾಧರ ಜೆ.ಎಂ., ಕೇಶವರೆಡ್ಡಿ, ಕಲಬುರಗಿ ಪೀಠಕ್ಕೆ ಮಲ್ಹಾರರಾವ್, ವೈ.ಹೆಚ್.ವಿಜಯ್‌ಕುಮಾರ್, ಅರ್ಚನಾ ಬಿ. ತಿವಾರಿ ಅವರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಲಾಗಿದೆ ಎಂದು ಕಾನೂನು ಇಲಾಖೆ ಆದೇಶಿಸಿದೆ.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News