×
Ad

ಸಕಲೇಶಪುರ: ಮೂಕನ ಮನೆ ಫಾಲ್ಸ್ ನಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

Update: 2023-07-23 22:11 IST

ಸಕಲೇಶಪುರ: ಜು 23: ಪ್ರಖ್ಯಾತ ಪ್ರವಾಸಿ ತಾಣ ಮೂಕನ ಮನೆ ಫಾಲ್ಸ್ ನಲ್ಲಿ ಸಿಲುಕ್ಕಿದ್ದ ಯುವಕನ ಪ್ರಾಣವನ್ನು ಪ್ರವಾಸಿ ಮಿತ್ರ (ಪ್ರವಾಸಿ ಪೊಲೀಸ್ )ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಬೆಂಗಳೂರು ಪ್ರವಾಸಿಗ ಸಂಜಯ್ ಪ್ರಾಣಪಾಯದಿಂದ ಪಾರಾದ ಯುವಕನಾಗಿದ್ದು, ಈತ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವಾಸಿ ಮಿತ್ರ (ಪ್ರವಾಸಿ ಪೊಲೀಸ್ ) ಸಿಬ್ಬಂದಿಗಳಾದ ಅಶ್ರಫ್ ಹಾಗೂ ಒಡವೆಲ್ ರವರು ನೀರಿನ ರಭಸವು ಹೆಚ್ಚಾಗಿದ್ದರೂ ಸಹ ಸ್ಥಳೀಯರ ಸಹಾಯದೊಂದಿಗೆ ಯುವಕನ ಪ್ರಾಣ ಉಳಿಸಿದ್ದಾರೆ. 

ಇವರ ಕರ್ತವ್ಯ ಮತ್ತು ಸಮಯ ಪ್ರಜ್ಞೆಗೆ ಸ್ಥಳೀಯರು ಮತ್ತು ಇತರ ಪ್ರವಾಸಿಗರು ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News