ಸಚಿವರನ್ನು ಎರಡು ಬಾರಿ ಹನಿಟ್ರ್ಯಾಪ್ ಮಾಡುವ ಯತ್ನ ನಡೆದಿದೆ : ಸತೀಶ್ ಜಾರಕಿಹೊಳಿ
Update: 2025-03-20 15:53 IST
ಸತೀಶ್ ಜಾರಕಿಹೊಳಿ
ಬೆಂಗಳೂರು : ‘ಸಚಿವರನ್ನು ಎರಡು ಬಾರಿ ಹನಿಟ್ರ್ಯಾಪ್ ಮಾಡುವ ಯತ್ನ ನಡೆದಿದ್ದು, ಅದು ಯಶಸ್ವಿ ಆಗಿಲ್ಲ.ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೂಡ ಸಂಬಂಧಪಟ್ಟ ಸಚಿವರ ಜೊತೆ ಇದ್ದೇವೆ. ಅವರಲ್ಲಿ ದೂರು ನೀಡಲು ಹೇಳಿದ್ದು, ಹನಿಟ್ರ್ಯಾಪ್‌ಗೆ ಕಡಿವಾಣ ಬೀಳಬೇಕು ಎಂದು ಆಗ್ರಹಿಸಿದರು.
ದೂರ ಕೊಟ್ಟರೆ ಪೊಲೀಸರಿಗೆ ತನಿಖೆ ಮಾಡಲು ಅನುಕೂಲ ಆಗುತ್ತದೆ. ಇದರ ಹಿಂದೆ ಯಾರಿದ್ದಾರೆ ಅನ್ನುವುದು ಹೊರಗೆ ಬರಬೇಕು. ಇದರಲ್ಲಿ ನಮ್ಮವರು ಅಷ್ಟೇ ಅಲ್ಲ. ಬೇರೆ ಪಕ್ಷದ ನಾಯಕರು ಹನಿಟ್ರ್ಯಾಪ್ನಲ್ಲಿ ಸಿಲುಕಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು. ಈ ವಿಚಾರವಾಗಿ ಸಿಎಂ ಮತ್ತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.