×
Ad

ತೆರಿಗೆ ಪಾವತಿಸದ ವಾಹನಗಳ ವಶ: 4.75 ಲಕ್ಷ ರೂ. ದಂಡ ಸಹಿತ ತೆರಿಗೆ ವಸೂಲಿ

Update: 2023-07-15 23:30 IST

ಸಾಗರ,ಜು.15: ಇಲ್ಲಿನ ಪ್ರಾದೇಶಿಕ ಸಹಾಯಕ ಸಾರಿಗೆ ಇಲಾಖೆ ವತಿಯಿಂದ ತೆರಿಗೆ ಪಾವತಿಸದೆ ಓಡಿಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡು 4.75 ಲಕ್ಷ ರೂ. ದಂಡ ಸಹಿತ ತೆರಿಗೆ ವಸೂಲಿ ಮಾಡಲಾಗಿದೆ.

ತೆರಿಗೆ ಪಾವತಿಸದೆ ಓಡಿಸುತ್ತಿದ್ದ ಒಂದು ಜೆಸಿಬಿ, ನಿಯಮಕ್ಕಿಂತ ಹೆಚ್ಚಿನ ಲೋಡ್ ತುಂಬಿ ಕೊಂಡು ಹೋಗುತ್ತಿದ್ದ 12 ಚಕ್ರದ ಎರಡು ಲಾರಿ, ಸೆರಂಡರ್ ಆಗಿದ್ದರೂ ಟ್ಯಾಕ್ಸ್ ಕಟ್ಟದೆ ಓಡಾಡುತ್ತಿದ್ದ ಒಂದು ಮ್ಯಾಕ್ಸಿ ಕ್ಯಾಬ್ ವಶಪಡಿಸಿಕೊಂಡು ದಂಡ ಸಹಿತ ತೆರಿಗೆ ವಸೂಲಿ ಮಾಡಲಾಗಿದೆ.

ಸಹಾಯಕ ಸಾರಿಗೆ ಅಧಿಕಾರಿ ರಾಕೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿರಿಯ ಮೋಟರ್ ವಾಹನ ನಿರೀಕ್ಷಕ ವಾಸುದೇವ ಬಿ., ಸಿಬ್ಬಂದಿ ಕೆ.ಬಿ. ಉಮೇಶ್, ಪಂಚಾಕ್ಷರಿ ಹಾಗೂ ಗೃಹರಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News