×
Ad

ಶಿವಮೊಗ್ಗ: ಕದ್ದು ತಂದಿದ್ದ ಜೆಸಿಬಿ ಬಳಸಿ ಎಟಿಎಂ ಯಂತ್ರ ಕಳ್ಳತನಕ್ಕೆ ಯತ್ನ

Update: 2023-07-26 10:41 IST

ಶಿವಮೊಗ್ಗ: ಕದ್ದಿರುವ ಜೆಸಿಬಿ ಬಳಸಿ ಎಟಿಎಂ ಯಂತ್ರ ಕದಿಯಲು ಯತ್ನಿಸಿದ ಘಟನೆ ಇಲ್ಲಿನ ವಿನೋಬ ನಗರದಲ್ಲಿ ಮಂಗಳವಾರ ರಾತ್ರಿ ವರದಿಯಾಗಿದೆ.

ಇಲ್ಲಿನ ವಿನೋಬನಗರ ಪೊಲೀಸ ಸ್ಟೇಷನ್​ ವ್ಯಾಪ್ತಿಯ ಶಿವಾಲಯ ಬಳಿಯ ಆಕ್ಸಿಸ್​ ಬ್ಯಾಂಕ್ ಎಟಿಎಂವೊಂದರಲ್ಲಿ ಈ ಘಟನೆ ನಡೆದಿದ್ದು, ಕಳ್ಳತನ ಮಾಡಿದ್ದ ಜೆಸಿಬಿಯನ್ನು ತಂದ ಆರೋಪಿ ಎಟಿಎಂ ಯಂತ್ರವನ್ನು ಎಗರಿಸಲು ಮುಂದಾಗಿದ್ದಾನೆ. ಈ ವೇಳೆ ರಾತ್ರಿ ಬೀಟ್ ನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ, ಇದನ್ನು ಕಂಡ ಕಳ್ಳ ಜೆಸಿಬಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆನ್ನಲಾಗಿದೆ. 

ದುಷ್ಕರ್ಮಿಯು ಜೆಸಿಬಿ ಬಳಸಿ ಎಟಿಎಂ ಓಪನ್ ಮಾಡುತ್ತಿರುವುದನ್ನ ಗಮನಿಸಿದ ಪೊಲೀಸರು ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಸಮೀಪದಲ್ಲಿಯೇ ಇರುವ ಪೆಟ್ರೋಲ್ ಬಂಕ್​ ಬಳಿಯಲ್ಲಿ ನಿಲ್ಲಿಸಲಾಗಿದ್ದ ಜೆಸಿಬಿಯನ್ನು ಕದ್ದು ಎಟಿಎಂ ಯಂತ್ರ ಕದಿಯಲು ಮುಂದಾಗಿದ್ದಾನೆ ಎನ್ನಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.

ಸದ್ಯ ಘಟನೆ ಸಂಬಂಧ ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜೆಸಿಬಿಯನ್ನು ಕೂಡ ತಮ್ಮ ವಶಕ್ಕೆ ಪಡೆದು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News