×
Ad

ಶಿವಮೊಗ್ಗ: ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ಆತ್ಮಹತ್ಯೆ

Update: 2024-08-09 14:29 IST

ಶಿವಮೊಗ್ಗ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸನಗರ ತಾಲೂಕಿನ ಮತ್ತಿಕೈ ಗ್ರಾಮ ವ್ಯಾಪ್ತಿಯ ಚಂಪಕಾಪುರದಲ್ಲಿ ನಡೆದಿದೆ.

ಮೃತರನ್ನು ರಾಜೇಶ್‌ ಎಂಬವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ (12), ಸಂಪದ (6) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ವಾಣಿ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬಾವಿಯಿಂದ ಮೃತದೇಹವನ್ನು ಮೇಲೆತ್ತಲಾಗಿದ್ದು, ನಗರ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ  ಸಿದ್ದತೆ ನಡೆಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ನಗರ ಠಾಣೆ ಪಿಎಸ್‌ಐ ರಮೇಶ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News