×
Ad

ಶಿವಮೊಗ್ಗ | ಬೆಂಕಿ ಅವಘಡ : ಸಿಲಿಂಡರ್‌ ಸ್ಫೋಟ, ಹೊತ್ತಿ ಉರಿದ ಬೇಕರಿ

Update: 2024-08-21 16:37 IST

ಶಿವಮೊಗ್ಗ: ಬೇಕರಿಯೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಸಿಲಿಂಡರ್‌ಗಳು ಸ್ಪೋಟಗೊಂಡ ಘಟನೆ ಶಿವಮೊಗ್ಗ ತಾಲೂಕು ಆಯನೂರಿನಲ್ಲಿ ನಡೆದಿದೆ.

ಆಯನೂರಿನ ಹಣಗೆರೆ ರಸ್ತೆಯಲ್ಲಿರುವ ಎಸ್‌ಎಲ್‌ವಿ ಐಯ್ಯಾಂಗಾರ್ ಬೇಕರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷದಲ್ಲಿ ಬೇಕರಿ ಒಳೆಗೆ ಮೂರು ಬಾರಿ ಸ್ಪೋಟ ಸಂಭವಿಸಿದೆ. ಸಿಲಿಂಡರ್‌ಗಳು ಸ್ಪೋಟಗೊಂಡಿವೆ ಎಂದು ತಿಳಿದು ಬಂದಿದೆ.

ಬೇಕರಿಯ ಅಕ್ಕಪಕ್ಕದಲ್ಲಿನ ಅಂಗಡಿಯವರು, ಗ್ರಾಹಕರು ಕೂಡಲೇ ಸ್ಥಳದಿಂದ ಓಡಿ ಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News