ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ | 70 ಸಾವಿರಕ್ಕೂ ಅಧಿಕ ಮಂದಿಯ ಸಮೀಕ್ಷೆ ಪೂರ್ಣ
ಬೆಂಗಳೂರು, ಸೆ.23: ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ನಡೆಯುತ್ತಿದ್ದು, ಎರಡು ದಿನಗಳು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ 18,487 ಕುಟುಂಬಗಳ 71,004 ಮಂದಿಯ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗವು ಮಾಹಿತಿ ನೀಡಿದೆ.
ಸೋಮವಾರದಂದು 10,642 ಮಂದಿಯ ಸಮೀಕ್ಷೆಯ ಹಾಗೂ ಮಂಗಳವಾರದಂದು 60,362 ಮಂದಿಯ ಸಮೀಕ್ಷೆಯು ಪೂರ್ಣಗೊಂಡಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ್ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ 7,496, ಬಳ್ಳಾರಿ 564, ಬೆಳಗಾವಿ 6,783, ಬೆಂಗಳೂರು ಗ್ರಾಮಾಂತರ 284, ಬೆಂಗಳೂರು ನಗರ 187, ಬೀದರ್ 861, ಚಾಮರಾಜನಗರ 471, ಚಿಕ್ಕಬಳ್ಳಾಪುರ 123, ಚಿಕ್ಕಮಗಳೂರು 2,664, ಚಿತ್ರದುರ್ಗ 5,074, ದಕ್ಷಿಣ ಕನ್ನಡ 431, ದಾವಣಗೆರೆ 4,377, ಧಾರವಾಡ 721, ಗದಗ 6,903, ಹಾಸನ ಜಿಲ್ಲೆಯಲ್ಲಿ 1,519 ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ.
ಹಾವೇರಿ 10,820, ಕಲಬುರಗಿ 3,996, ಕೊಡಗು 1,124, ಕೋಲಾರ 233, ಕೊಪ್ಪಳ 1,144, ಮಂಡ್ಯ 4,398, ಮೈಸೂರು 1,018, ರಾಯಚೂರು 2,129, ರಾಮನಗರ 759, ಶಿವಮೊಗ್ಗ 1,184, ತುಮಕೂರು 21, ಉಡುಪಿ 231, ಉತ್ತರ ಕನ್ನಡ 3,475, ವಿಜಯನಗರ 773, ವಿಜಯಪುರ 743 ಮತ್ತು ಯಾದಗಿರಿ ಜಿಲ್ಲೆಯಲ್ಲಿ 498 ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಆಯೋಗವು ಅಂಕಿ-ಅಂಶಗಳನ್ನು ಪ್ರಕಟಿಸಿದೆ.
ರಾಜ್ಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಶುರುವಾಗಿದ್ದು, ಚೆನ್ನಾಗಿ ನಡೆಯುತ್ತಿದೆ. ಸಮೀಕ್ಷೆ ಸಂಬಂಧ ಗೊಂದಲ, ತಾಂತ್ರಿಕ ಸಮಸ್ಯೆ ಬಗ್ಗೆ ನಿರ್ವಹಿಸಲು ಸದಸ್ಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದೇವೆ. ಸಮೀಕ್ಷೆಯನ್ನು ನಾನು ಪ್ರತಿದಿನ ಮಾನಿಟರ್ ಮಾಡುತ್ತಿಲ್ಲ. ಅದು ನನ್ನ ಕೆಲಸ ಅಲ್ಲ. ಹಾಗೇನಾದರೂ ಇದ್ದರೆ ನನ್ನ ಗಮನಕ್ಕೆ ತರುತ್ತಾರೆ. ನಾನು ಅದನ್ನು ಪರಿಹಾರ ಮಾಡುತ್ತೇನೆ. ಸಣ್ಣ ಸಣ್ಣ ವಿಷಯಗಳನ್ನು ಪರಿಹಾರ ಮಾಡುವುದು ನನ್ನ ಕೆಲಸವಲ್ಲ. ಅದನ್ನು ಅಧಿಕಾರಿಗಳು ಮಾಡುತ್ತಾರೆ.
- ಮಧುಸೂದನ್ ಆರ್.ನಾಯ್ಕ್, ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ