×
Ad

ಬೆಳಗಾವಿ ಸುವರ್ಣ ಸೌಧದಲ್ಲಿ ಕಟ್ಟೆಚ್ಚರಕ್ಕೆ ಸ್ಪೀಕರ್ ಸೂಚನೆ

Update: 2023-12-13 15:05 IST

Speaker's notice to close vigil in Suvarna Soudha, Belgaumಬೆಳಗಾವಿ, ಡಿ.13: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಅಪರಿಚಿತರು ಸದನಕ್ಕೆ ನುಗ್ಗಿದ ಘಟನೆಯ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣ ಸೌಧದಲ್ಲೂ ಕಟ್ಟೆಚ್ಚರಕ್ಕೆ ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದ್ದಾರೆ.

ಖುದ್ದು ಸ್ಪೀಕರ್ ಅವರು ಪೊಲೀಸ್, ಜಿಲ್ಲಾಧಿಕಾರಿ ಹಾಗೂ ಮಾರ್ಷಲ್ಗಳಿಂದ ಸುವರ್ಣ ಸೌಧದ ಭದ್ರತೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.

ಸಭಾಂಗಣದ ಸುತ್ತ ರೌಂಡ್ ಹಾಕಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಸ್ಪೀಕರ್ ಅವರು ಶಾಸಕರು, ಸಚಿವರ ಆಪ್ತ ಸಹಾಯಕರು(ಪಿಎ) ಎಂದು ಹೇಳಿಕೊಂಡು ಬರುವವರ ಬಗ್ಗೆ ನಿಗಾ ವಹಿಸುವಂತೆ ಭದ್ರತಾ ಸಿಬ್ಬಂದಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News