×
Ad

ಯಾರೇ ಬಂದರೂ ನನ್ನನ್ನು ತುಳಿಯಲು ಸಾಧ್ಯವಿಲ್ಲ: ಸತೀಶ್ ಜಾರಕಿಹೊಳಿ

Update: 2025-01-27 21:28 IST

ಸತೀಶ್ ಜಾರಕಿಹೊಳಿ

ಬೆಂಗಳೂರು: ಪಕ್ಷಕ್ಕೆ ಯಾರೇ ಬಂದರೂ ನನ್ನನ್ನು ತುಳಿಯಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಬಿ.ಶ್ರೀರಾಮುಲು ಕಾಂಗ್ರೆಸ್‍ಗೆ ಬಂದರೆ ತಮಗೆ ಹಿನ್ನಡೆಯಾಗಬಹುದೇ ಎಂಬ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಬಿ.ಶ್ರೀರಾಮುಲು ಅವರನ್ನು ಕಾಂಗ್ರೆಸ್‍ಗೆ ಕರೆತಂದರೆ ತನ್ನನ್ನು ತುಳಿದಂತೆ ಆಗುವುದಿಲ್ಲ, ಅದೆಲ್ಲ ಊಹಾಫಹಗಳು ಎಂದರು.

ಶ್ರೀರಾಮುಲು ಅವರ ಕಾರ್ಯಕ್ಷೇತ್ರ ಬಳ್ಳಾರಿ ಮತ್ತು ನನ್ನದು ಬೆಳಗಾವಿ. ನಮ್ಮ ನಡುವೆ ಘರ್ಷಣೆ ಉಂಟಾಗುವ ಸಂದರ್ಭವೇ ಉಂಟಾಗುವುದಿಲ್ಲ. ಅಷ್ಟಕ್ಕೂ ಖುದ್ದು ಶ್ರೀರಾಮುಲು ಅವರೇ ಕಾಂಗ್ರೆಸ್‍ಗೆ ಬರಲ್ಲ ಎಂದಿದ್ದಾರೆ ಎಂದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News