×
Ad

ಶ್ರೀರಂಗಪಟ್ಟಣ: ಪತ್ನಿಯನ್ನು ಕೊಂದು ಮೃತದೇಹವನ್ನು ನದಿಗೆ ಎಸೆದ ಪತಿ

Update: 2023-08-10 14:43 IST

ಶ್ರೀರಂಗಪಟ್ಟಣ: ತನ್ನ ಪತ್ನಿಯನ್ನು ಹತ್ಯೆಗೈದ ವ್ಯಕ್ತಿಯೊಬ್ಬ ಮೃತದೇಹವನ್ನು ನದಿಗೆ ಎಸೆದು ಬಳಿಕ ಪೊಲೀಸ್‌ ಠಾಣೆಗೆ ಶರಣಾಗಿರುವ ಘಟನೆ ಬುಧವಾರ ವರದಿಯಾಗಿದೆ. 

ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೊಪ್ಪಲು ಗ್ರಾಮದ ಶ್ರೀನಾಥ್ ಎಂಬಾತನೇ ತನ್ನ ಪತ್ನಿ ಪೂಜಾ (29) ಳನ್ನು ಹತ್ಯೆಗೈದ ಆರೋಪಿಯಾಗಿದ್ದು, ಈತ ಬುಧವಾರ ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಡಿರುವ ಬಗ್ಗೆ ತಪ್ಪೊಕೊಂಡಿದ್ದಾನೆ‌ ಎಂದು ತಿಳಿದು ಬಂದಿದೆ. 

ಪೂಜಾ ಅವರನ್ನು ರವಿವಾರ ವೇಲ್‌ನಿಂದ ಬಿಗಿದು ಕೊಲೆ ಮಾಡಿ ಬೋರೇದೇವರ ದೇವಾಲಯ ಬಳಿ ಕಾವೇರಿ ನದಿಗೆ ಎಸೆದಿದ್ದಾನೆನ್ನಲಾಗಿದೆ. ಅನೈತಿಕ ಸಂಬಂಧ ಹೊಂದಿದ್ದ  ಕಾರಣಕ್ಕೆ ಪೂಜಾಳನ್ನು ಕೊಲೆ ಮಾಡಿರುವುದಾಗಿ ಆರೋಪಿಯು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಆರೋಪಿಯು ನೀಡಿದ ಮಾಹಿತಿ ಆಧರಿಸಿ ಶೋಧ ನಡೆಸಿದ ಪೊಲೀಸರಿಗೆ ರಾಮಸ್ವಾಮಿ ನಾಲೆಯ ಗೇಟ್‌ ಬಳಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿದೆ. ಈ ಸಂಬಂಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News