×
Ad

ಎಸೆಸೆಲ್ಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟ: ಶೇ.20.1ರಷ್ಟು ಉತ್ತೀರ್ಣತೆ ದಾಖಲು

Update: 2025-07-23 21:16 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : 2025ರ ಎಸೆಸೆಲ್ಸಿ ಪರೀಕ್ಷೆ-3ರ ಫಲಿತಾಂಶವು ಬುಧವಾರದಂದು ಪ್ರಕಟವಾಗಿದ್ದು, ಶೇ.20.1ರಷ್ಟು ಉತ್ತೀರ್ಣತೆ ದಾಖಲಾಗಿದೆ. ಎಸೆಸೆಲ್ಸಿ ಪರೀಕ್ಷೆ-3 ರಲ್ಲಿ 2,09,374 ಮಂದಿ ಹಾಜರಾಗಿದ್ದು, 42,085 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದವರ ಪೈಕಿ 38,679 ವಿದ್ಯಾರ್ಥಿಗಳು ಹೊಸಬರಾಗಿದ್ದು, 3,406 ರೀಪಿಟರ್ಸ್ ಆಗಿದ್ದಾರೆ. 455 ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಹೆಚ್ಚಳವಾಗಿದೆ.

ಶೇ.19.33ರಷ್ಟು ಸರಕಾರಿ ಶಾಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.20.53ರಷ್ಟು ಅನುದಾನಿತ ಶಾಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.25.75ರಷ್ಟು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.20.35ರಷ್ಟು ಬಾಲಕರು ಮತ್ತು ಶೇ.22.65ರಷ್ಟು ಬಾಲಕಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಸೆಸೆಲ್ಸಿ ಪರೀಕ್ಷೆ-3 ಬರೆದ 76,706 ಮಂದಿ ನಗರ ವಿದ್ಯಾರ್ಥಿಗಳ ಪೈಕಿ 16,039 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ನಗರ ಪ್ರದೇಶದ ವಿದ್ಯಾರ್ಥಿಗಳ ಉತ್ತೀರ್ಣತೆಯು ಶೇ.20.91ರಷ್ಟಿದೆ. 1,05,877 ಮಂದಿ ಗ್ರಾಮೀಣ ವಿದ್ಯಾರ್ಥಿಗಳ ಪೈಕಿ 22,640 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶವು ಶೇ.21.38ರಷ್ಟಿದೆ.

ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ-3 ಅನ್ನು ಜು.5ರಿಂದ ಜು.12ರವರೆಗೆ ನಡೆಸಲಾಯಿತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಜು.18ರಿಂದ ಜು.21ರವರೆಗೆ 88 ಮೌಲ್ಯಮಾಪನ ಕೇಂದ್ರಗಳಲ್ಲಿ 20,443 ಮೌಲ್ಯಮಾಪಕರಿಂದ ನಡೆಸಲಾಗಿದೆ. ಪರೀಕ್ಷೆಯ ಫಲಿತಾಂಶವನ್ನು ಬುಧವಾರದಂದು ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ರವಾನಿಸಲಾಗಿದೆ.

2025ರ ಎಸೆಸೆಲ್ಸಿಯ ಒಟ್ಟಾರೆ ಫಲಿತಾಂಶವು ಶೇ.74.31ರಷ್ಟಿದೆ. ಈ ಬಾರಿ 8,68,385 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯನ್ನು ಬರೆದಿದ್ದು, 6,45,273 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ-1ರಲ್ಲಿ 5,28,265 ವಿದ್ಯಾರ್ಥಿಗಳು, ಪರೀಕ್ಷೆ-2ರಲ್ಲಿ 88,229 ವಿದ್ಯಾರ್ಥಿಗಳು, ಪರೀಕ್ಷೆ-3ರಲ್ಲಿ 42,085 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News