×
Ad

ಸನಾತನ ಧರ್ಮದ ಕುರಿತು ಹೇಳಿಕೆ : ಎ.24 ರಂದು ಖುದ್ದು ಹಾಜರಾಗುವಂತೆ ಉದಯನಿಧಿ ಸ್ಟಾಲಿನ್‌ಗೆ ಕೋರ್ಟ್ ಸಮನ್ಸ್

Update: 2024-03-04 19:12 IST

ಉದಯನಿಧಿ ಸ್ಟಾಲಿನ್ Photo- PTI

ಬೆಂಗಳೂರು: ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.

ಎಪ್ರಿಲ್ 24 ರಂದು ಖುದ್ದು ಹಾಜರಾಗುವಂತೆ ಉದಯನಿಧಿ ಸ್ಟಾಲಿನ್ ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಜೆ.ಪ್ರೀತ್ ಆದೇಶಿಸಿದ್ದಾರೆ. ಅಲ್ಲದೆ ಇತರೆ ಮೂವರು ಆರೋಪಿಗಳಾದ ವೆಂಕಟೇಶ್, ಮಧುಕರ್ ರಾಮಲಿಂಗಂ, ಅಡವನ್ ದಿಚನ್ಯ ಅವರಿಗೆ ವಕೀಲರ ಮೂಲಕ ಹಾಜರಿಗೆ ಸೂಚಿಸಲಾಗಿದೆ.

ಹಿಂದೂ ಧರ್ಮ ಕುರಿತು ಹೇಳಿಕೆಯ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ವಿ. ಪರಮೇಶ್ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News