×
Ad

2020 ಹಾಗೂ 2021ರ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ಪ್ರಕಟ

Update: 2026-01-12 15:20 IST

ರಘುನಾಥ ಚ.ಹ/ಪ್ರಕಾಶರಾಜ್ ಮೇಹು

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020 ಹಾಗೂ 2021ನೇ ಕ್ಯಾಲೆಂಡರ್ ವರ್ಷಗಳ ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.

2020ನೇ ಕ್ಯಾಲೆಂಡರ್ ವರ್ಷದ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆ ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಪ್ರಕಟಿಸಿದ, ಹಿರಿಯ ಪತ್ರಕರ್ತ ರಘುನಾಥ ಚ.ಹ.ಅವರು ಆಯ್ದ 20 ಸಿನೆಮಾಗಳ ಕುರಿತು ಬರೆದ ಲೇಖನಗಳ ಸಂಗ್ರಹ "ನಮೋ ವೆಂಕಟೇಶ" ಕೃತಿ ಆಯ್ಕೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿದ್ದ ಹಿರಿಯ ಪತ್ರರ್ತರಾದ ಡಾ.ರಾಜಶೇಖರ ಹತಗುಂದಿ ಹಾಗೂ ಬಸವರಾಜ ಮೇಗಲಕೇರಿ ಅವರು 2020ನೇ ಕ್ಯಾಲೆಂಡರ್ ವರ್ಷದ ಕೃತಿಯನ್ನು ಆಯ್ಕೆ ಮಾಡಿದ್ದರು.

2021ನೇ ಕ್ಯಾಲೆಂಡರ್ ವರ್ಷದ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಸಿರಿಗಂಧ ಪ್ರಕಾಶನ ಪ್ರಕಟಿಸಿರುವ, ಲೇಖಕ ಹಾಗೂ ಚಲನಚಿತ್ರ ನಿರ್ದೇಶಕ ಪ್ರಕಾಶರಾಜ್ ಮೇಹು ಅವರು ಬರೆದ ಡಾ.ರಾಜಕುಮಾರ್ ಬದುಕಿನ ಕುರಿತ "ಅಂತರಂಗದ ಅಣ್ಣ" ಕೃತಿ ಆಯ್ಕೆಯಾಗಿದೆ. ಸಾಹಿತಿ ಡಾ.ಚಿದಾನಂದ ಸಾಲಿ ಹಾಗೂ ಪತ್ರಕರ್ತ ಡಾ.ಶರಣು ಹುಲ್ಲೂರು ಅವರು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.

ಪ್ರಶಸ್ತಿಯು ಲೇಖಕರು ಹಾಗೂ ಪ್ರಕಾಶಕರಿಬ್ಬರಿಗೂ ತಲಾ 20 ಸಾವಿರ ರೂ.ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕಗಳನ್ನು ಒಳಗೊಂಡಿದೆ ಎಂದು ಎಂದು ವಾರ್ತಾ ಇಲಾಖೆ ಜಂಟಿ ನಿರ್ದೇಶಕ, ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ಮಂಜುನಾಥ ಡೊಳ್ಳಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News