×
Ad

ಆಸ್ತಿ ವರ್ಗಾವಣೆ ಮಾಡದ್ದಕ್ಕೆ ತಂದೆಯ ಕಣ್ಣು ಕಿತ್ತಿದ್ದ ಮಗನಿಗೆ ಕೋರ್ಟ್‍ನಿಂದ 9 ವರ್ಷ ಕಾರಾಗೃಹ ಶಿಕ್ಷೆ

Update: 2023-11-23 23:20 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆತ್ತ ತಂದೆಯ ಕಣ್ಣು ಕಿತ್ತು ಹಾಕಿದ ಮಗನಿಗೆ 9 ವರ್ಷ ಜೈಲು ಶಿಕ್ಷೆ ಮತ್ತು 42 ಸಾವಿರ ರೂ. ದಂಡ ವಿಧಿಸಿ ನಗರದ 57ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ಅಭಿಶೇಕ್ ಚೇತನ್(44) ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಮಾರಣಾಂತಿಕ ಹಲ್ಲೆ, ಕೊಲೆ ಯತ್ನ, ಆಸ್ತಿ ವಿಚಾರ ವಾಗಿ ನಂಬಿಕೆ ದ್ರೋಹ ಮತ್ತು ಶಾಂತಿಭಂಗ ಮತ್ತು ಆಸ್ತಿ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 42 ಸಾವಿರ ರೂ. ದಂಡ ವಿಧಿಸಿದೆ.

ತನ್ನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿಲ್ಲ ಎಂಬ ಕಾರಣಕ್ಕೆ ಅಭಿಶೇಕ್ ತನ್ನ 66 ವರ್ಷದ ತಂದೆ ಪರಮೇಶ್ ಮೇಲೆ ಹಲ್ಲೆ ನಡೆಸಿ ಕಣ್ಣು ಕಿತ್ತುಹಾಕಿದ್ದ. 2018ರ ಆ.29ರಂದು ಬನಶಂಕರಿಯ ಶಾಕಾಂಬರಿನಗರದಲ್ಲಿ ಈ ಘಟನೆ ನಡೆದಿತ್ತು.

ಜೆ.ಪಿ.ನಗರ ಠಾಣಾ ಪೊಲೀಸರು ಎಫ್‍ಐಆರ್ ದಾಖಲಿಸಿ ಅಭಿಶೇಕ್ ನನ್ನು ಬಂಧಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಪರಾಧಿ ಅಭಿಷೇಕ್‍ನನ್ನು ನ್ಯಾಯಾಲಯವು ಜೈಲಿಗೆ ಕಳುಹಿಸಿದೆ. ಪೊಲೀಸರ ಪರ ಸರಕಾರಿ ಅಭಿಯೋಜಕಿ ಕೆ.ಎಸ್.ವೀಣಾ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News