ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ರಾಜ್ಯ ಸರಕಾರ ಆದೇಶ

Update: 2024-03-16 15:18 GMT

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬ್ಯಾರಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಸೇರಿ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರಕಾರ ಶನಿವಾರದ ಆದೇಶ ಹೊರಡಿಸಿದೆ.

ಅಭಿವೃದ್ಧಿ ಪ್ರಾಧಿಕಾರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಪುರುಷೋತ್ತಮ ಬಿಳಿಮಲೆ ನೇಮಕವಾಗಿದ್ದು, ಪ್ರೊ. ರಾಮಚಂದ್ರಪ್ಪ, ಡಾ.ವಿ.ಪಿ.ನಿರಂಜನಾರಾಧ್ಯ, ಟಿ.ಗುರುರಾಜ್, ಡಾ.ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ವಿರೂಪಣ್ಣ ಕಲ್ಲೂರು ಸದಸ್ಯರಾಗಿ ನೇಮಕವಾಗಿದ್ದಾರೆ.

ಭಾಷಾ ಭಾರತಿ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಚನ್ನಪ್ಪ ಕಟ್ಟಿ ನೇಮಕವಾಗಿದ್ದು, ಡಾ.ಎಂ.ಎಸ್. ಶೇಖರ್, ವಿಜಯಲಕ್ಷ್ಮಿ ಕೌಟಗಿ, ನಾರಾಯಣ್ ಹೊಡಘಟ್ಟ, ಶಾಕಿರಾ ಬಾನು, ಡಾ.ಪಿ. ಭಾರತಿ ದೇವಿ, ಡಾ.ಎಸ್.ಗಂಗಾಧರಯ್ಯ, ಡಾ.ಕರಿಯಪ್ಪ ಮಾಳಗಿ, ಡಾ.ಚಿತ್ತಯ್ಯ ಪೂಜಾರ್, ಡಾ.ಜಾಜಿ ದೇವೇಂದ್ರಪ್ಪ ಸದಸ್ಯರಾಗಿ ನೇಮಕವಾಗಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಮೈಸೂರಿನ ಮಾನಸ ನೇಮಕವಾಗಿದ್ದು, ಡಾ.ಲಕ್ಷ್ಮಣ ಕೊಡಸೆ, ಶರಣಪ್ಪ ಬಸಪ್ಪ ಕೊಲ್ಕಾರ್, ಕುಶಾಲ ಬರಗೂರು, ಎಚ್.ಬಿ.ನೀರಗುಡಿ, ಅಕ್ಷತಾ ಹುಂಚದಕಟ್ಟೆ ಸದಸ್ಯರಾಗಿ ನೇಮಕವಾಗಿದ್ದಾರೆ.

ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಶೋಕ್ ಚಂದರಗಿ, ಡಾ.ಎಂ.ಎಸ್. ಮದಬಾವಿ, ಜಾಣಗೆರೆ ವೆಂಕಟರಾಮಯ್ಯ, ಭಗತರಾಜ್, ಎ.ಆರ್.ಸುಬ್ಬಯ್ಯಕಟ್ಟೆ, ಡಾ.ಸಂಜೀವ ಕುಮಾರ್ ಅತಿವಾಡ, ಶಿವರೆಡ್ಡಿ ಹೆಡೇದ್ ಸದಸ್ಯರಾಗಿ ನೇಮಕವಾಗಿದ್ದಾರೆ.

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಡಾ.ಎಲ್.ಎನ್.ಮುಕುಂದರಾಜ್ ನೇಮಕವಾಗಿದ್ದು, ಅರ್ಜುನ ಗೋಳಸಂಗಿ, ಡಾ.ಎಚ್.ಜಯಪ್ರಕಾಶ್ ಶೆಟ್ಟಿ, ಡಾ.ಚಂದ್ರಕಲಾ ಬಿದರಿ, ಸಿದ್ದಪ್ಪ ಹೊನಕಲ್, ಡಾ.ಚಿಲಕ್ ರಾಗಿ, ಡಾ.ಗಣೇಶ್, ಸುಮಾ ಸತೀಶ್, ಎಚ್.ಆರ್.ಸುಜಾತ, ಅಕ್ಕೈ ಪದ್ಮಶಾಲಿ, ಪಿ.ಚಂದ್ರಿಕಾ, ಪ್ರಕಾಶ್ ರಾಜ್ ಮೇಹು, ಮಲ್ಲಿಕಾರ್ಜುನ ಮಾನ್ಪಡೆ, ಅಜಮೀರ್ ನಂದಾಪುರ, ಚಂದ್ರ ಕಿರಣ, ಮಹದೇವ ಬಸರಕೋಡ ಸದಸ್ಯರಾಗಿ ನೇಮಕವಾಗಿದ್ದಾರೆ.

ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೆ.ವಿ.ನಾಗರಾಜಮೂರ್ತಿ ನೇಮಕವಾಗಿದ್ದು, ಜೇವರ್ಗಿ ರಾಜಣ್ಣ, ಜಿಪಿಒ ಚಂದ್ರು, ಅಮಾಸ, ಮಾಲೂರು ವಿಜಿ, ಷಾಹಿ ಜಾಹಿದಾ, ಎಸ್.ರಾಮು, ಜ್ಯೋತಿ ಮಂಗಳೂರು, ಗೀತಾ ಸಿದ್ಧಿ, ಬಾಬು ವಿ. ಕುಂಬಾರ, ಗಾಯತ್ರಿ ಹಡಪದ, ಲವಕುಮಾರ, ಕೆ.ಎ.ಬನಟ್ಟಿ, ಉಗಮ ಶ್ರೀನಿವಾಸ, ಬಾಬಾ ಸಾಹೇಬ್ ಕಾಂಬ್ಳೆ, ಚಾಂದ್ ಪಾಷಾ ಬಾಬು ಸಾಬ್ ಕಿಲ್ಲೇದಾರ್ ಸದಸ್ಯರಾಗಿ ನೇಮಕವಾಗಿದ್ದಾರೆ.

ಸಂಗೀತ, ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಡಾ.ಕೃಪಾ ಫಡಕಿ, ವಿದ್ಯಾನ್ ವೆಂಕಟರಾಘವನ್, ಖಾಸಿಂ ಮಲ್ಲಿಗೆ ಮಡು, ಬಿ.ವಿ. ಶ್ರೀನಿವಾಸ್, ರಮೇಶ್ ಗಬೂರು, ಸತ್ಯವತಿ ರಾಮನಾಥ್, ಸವಿತಾ ಅಮರೇಶ್ ನುಗಡೋಣಿ, ಹರಿದೋಗ್ರಾ, ಬಸಪ್ಪ ಹೆಚ್. ಭಜಂತ್ರಿ, ಡಾ. ಗೀತಾ, ಉಷಾ, ನಿರ್ಮಲಾ, ಶಂಕರ್ ಹೂಗಾರ, ಡಾ. ಮೃತ್ಯುಂಜಯ ದೊಡ್ಡವಾಡ, ಹುಸೇನ್ ಸಾಬ್, ಪದ ದೇವರಾಜ್ ಸದಸ್ಯರಾಗಿ ನೇಮಕವಾಗಿದ್ದಾರೆ.

ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಎಂ.ಸಿ.ರಮೇಶ್ ನೇಮಕವಾಗಿದ್ದು, ರಾಮಮೂರ್ತಿ, ಬಸಮ್ಮ ನರಗುಂದ, ಹರೀಶ್ ಮಾಳಪ್ಪನವರ್, ಬಿ.ಸಿ.ಶಿವಕುಮಾರ್, ನಾಗರಾಜ್ ಶಿಲ್ಪಿ, ವಿಶಾಲ್, ಹನುಮಂತ ಬಾಡದ, ಗೋಪಾಲ ಕಮ್ಮಾರ, ಭಾರತಿ ಸಂಕಣ್ಣಾಚಾರ್, ವೈ.ಕುಮಾರ ಸದಸ್ಯರಾಗಿ ನೇಮಕವಾಗಿದ್ದಾರೆ.

ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಡಾ.ಪ.ಸ.ಕುಮಾರ್ ನೇಮಕವಾಗಿದ್ದು, ಸದಸ್ಯರಾಗಿ ಬಸವರಾಜ್ ಎಸ್ ಜಾನೆ, ರಾ. ಸೂರಿ, ಕರಿಯಪ್ಪ ಹಂಚಿನ ಮನಿ, ಮನು ಚಕ್ರವರ್ತಿ, ಪಿ.ಮಹಮ್ಮದ್ (‘ವಾರ್ತಾಭಾರತಿ’ ಪತ್ರಿಕೆ ವ್ಯಂಗ್ಯಚಿತ್ರಗಾರ), ಶಾಂತಾ ಕೊಳ್ಳಿ, ಅನಿತಾ ನಟರಾಜ್ ಹುಳಿಯಾರ್, ಚಂದ್ರಕಾಂತ್ ಸರೋದೆ, ಬಸವರಾಜ ಕಲೆಗಾರ, ಆಶಾರಾಣಿ, ಮಹದೇವ ಶೆಟ್ಟಿ, ಫಾತಿಮಾ, ಆರ್. ಶಂಕರ್, ರಾಜೇಶ್ವರಿ ಮೋಪಗಾರ, ವೆಂಕಟೇಶ್ ಬಡಿಗೇರ ನೇಮಕವಾಗಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ತಾರನಾಥ್ ಗಟ್ಟಿ ಕಾಪಿಕಾಡ್ ನೇಮಕವಾಗಿದ್ದು, ಸದಸ್ಯರಾಗಿ ಪೃಥ್ವಿರಾಜ್, ಕುಂಬ್ರ ದುರ್ಗಾಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆರ್. ಶೆಟ್ಟಿ, ಶೈಲೇಶ್ ಬಿನ್ ಬೋಜ ಸುವರ್ಣ, ಕಿಶೋರ್ ಬಿನ್ ಗುಡ್ಡಪ್ಪಗೌಡ, ಬೂಬ ಪೂಜಾರಿ, ರೋಹಿತಾಶ್ಚ ಯು ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ ಮತ್ತು ಸಂತೋಷ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜೊಕಿಂ ಸ್ಮಾನ್ಲಿ ಅಲ್ಯಾರಿಸ್ ನೇಮಕವಾಗಿದ್ದು, ವಂ. ಪ್ರಕಾಶ್ ಮಾಡ್ತಾ ಎಸ್.ಜೆ., ರೊನಾಲ್ಡ್ ಕ್ರಾಸ್ತಾ, ಡಾ. ವಿಜಯ ಲಕ್ಷ್ಮಿ ನಾಯಕ್, ಸ್ವಪ್ನಾ ಮೇ ಕ್ರಾಸ್ತಾ, ಸಮರ್ಥ ಭಟ್, ಸುನೀಲ್ ಸಿದ್ದಿ, ಜೇಮ್ಸ್ ಲೋಪಿಸ್, ದಯಾನಂದ ಮುಡ್ಕೇಕರ್, ಪ್ರಮೋದ್ ಪಿಂಟೋ ಸದಸ್ಯರಾಗಿ ನೇಮಕವಾಗಿದ್ದಾರೆ.

ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಉಮರ್ ಯು.ಎಚ್. ನೇಮಕವಾಗಿದ್ದು, ಬಿ.ಎಸ್. ಮೊಹಮದ್, ಹಫ್ಸಾ ಬಾನು, ಸಾರಾ ಅಲಿ ಪರ್ಲಡ, ಶಮೀರಾ ಜಹಾನ್, ಯು.ಎಚ್.ಖಾಲಿದ್ ಉಜಿರ್, ತಾಜುದ್ದೀನ್, ಅಬೂಬಕರ್ ಅನಿಲ ಕಟ್ಟೆ, ಅಬ್ದುಲ್ ಶರೀಫ್, ಅಮೀದ್ ಹಸನ್ ಮಾಡೂರು, ಶಮೀರ್ ಮುಲ್ಕಿ ಸದಸ್ಯರಾಗಿ ನೇಮಕವಾಗಿದ್ದಾರೆ.

ಅರೆಭಾಷೆ ಸಂಸ್ಕೃ ತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸದಾನಂದ ಮಾವಜಿ ನೇಮಕವಾಗಿದ್ದು, ಚಂದ್ರಶೇಖರ್ ಪೇರಾಲು, ತೇಜಕುಮಾರ್ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಮಾಜಿ, ಪಿ.ಎಸ್ ಕಾರ್ಯಪ್ಪ, ಡಾ. ಎನ್.ಎ. ಜ್ಞಾನೇಶ್ ಸದಸ್ಯರಾಗಿ ನೇಮಕವಾಗಿದ್ದಾರೆ.

ಬಯಲಾಟ ಅಕಾಡೆಮಿ ಅಧ್ಯಕ್ಷ ರಾಗಿ ಪ್ರೊ.ದುರ್ಗಾದಾಸ್ ಆಯ್ಕೆಯಾಗಿದ್ದು, ಸದಸ್ಯರಾಗಿ ಬಿ. ಪರಶುರಾಮ್, ಅನಸೂಯ ವಡ್ಡರ್, ಚಂದ್ರು ಕಾಳೇನಹಳ್ಳಿ, ಭೀಮಪ್ಪ ರಾಮಪ್ಪ ಹುದ್ದಾರ್, ಮಲ್ಲಮ್ಮ ಸಾಲಹಳ್ಳಿ, ಮಾರನಾಯಕ, ಲಿಂಗಪ್ಪ ತೋರಣಗಟ್ಟಿ, ಯಲ್ಲಪ್ಪ ಮಾಸ್ತರ ನವಲಕಲ್, ಸುಜಾತ ಹಳಿಹಾಳ, ಡಿ. ಫಾಲಾಕ್ಷಯ್ಯ ಆಯ್ಕೆಯಾಗಿದ್ದಾರೆ.

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ತಲ್ಲೂರ್ ಶಿವರಾಮಶೆಟ್ಟಿ ನೇಮಕವಾಗಿದ್ದು, ರಾಘವ ಎಚ್. ಕೃಷ್ಣಪ್ಪ ಪೂಜಾರಿ, ಗುರುರಾಜ್ ಭಟ್, ವಿನಯ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ, ಮೋಹನ್ ಕೊಪ್ಪಾಳ್, ಸತೀಶ್ ಅಡ್ಡಪ್ಪ ಸಂಕಬೈಲ್, ರಾಕೇಶ್ ಕಳೈ, ದಯಾನಂದ ಪಿ., ಜಿ.ವಿ.ಎಸ್. ಉಳ್ಳಾಲ್ ಸದಸ್ಯರಾಗಿ ನೇಮಕವಾಗಿದ್ದಾರೆ.

ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಶಿವಪ್ರಸಾದ್ ಗೊಲ್ಲಹಳ್ಳಿ ನೇಮಕವಾಗಿದ್ದು, ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಉಮೇಶ್, ಡಾ. ಜಮೀರುಲ್ಲ ಷರೀಪ್, ಮಂಜುನಾಥ್ ರಾಮಣ್ಣ, ಸಂಕರಣ್ಣ ಸಂಗಣ್ಣನವರ್, ರಂಗಪ್ಪ ಮಾಸ್ತರ, ಗುರುರಾಜ್, ಡಾ. ಕೆಂಪಮ್ಮ, ಡಾ. ಎಂ.ಎಂ. ಪಡಶೆಟ್ಟಿ, ದೇವಾನಂದ ವರಪ್ರಸಾದ್, ನಿಂಗಣ್ಣ ಮುದೆನೂರು, ಕೆಂಕೆರೆ ಮಲ್ಲಿಕಾರ್ಜುನ, ಜೀವನ್ ಸಾಬ್ ವಾಲೀಕಾರ್, ಶಿವಮೂರ್ತಿ ತನಿಖೆದಾರ್, ಮಹಬೂಬ್ ಸಾಬ್ ಕಿಲ್ಲೇದಾರ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬಂಜಾರ ಅಕಾಡೆಮಿಯ ಅಧ್ಯಕ್ಷರಾಗಿ ಡಾ.ಎ.ಆರ್.ಗೋವಿಂದ ಸ್ವಾಮಿ ನೇಮಕವಾಗಿದ್ದು, ಶಾಂತಾ ನಾಯಕ್ ಶಿರಗಾನಹಳ್ಳಿ, ಭಾರತಿ ಬಾಯಿ ಕೂಬಾ, ಪಳನಿಸ್ವಾಮಿ ಜಾಗೇರಿ, ಆರ್.ಬಿ. ನಾಯ್ಕ, ಶೇಖರಪ್ಪ ಜೇಮಲಪ್ಪ ಲಮಾಣಿ, ಡಾ. ರವಿನಾಯ್ಕ, ಸಾವಿತ್ರಿ ಬಾಯಿ, ಅಣ್ಣಾರಾಯ್ ರಾಠೋಡ್, ಸುರೇಖಾ ಲಮಾಣಿ, ಕುಮಾರ್ ತಾರೊನಾಥ್ ರಾಠೋಡ್ ಸದಸ್ಯರಾಗಿ ನೇಮಕವಾಗಿದ್ದಾರೆ.

ರಂಗ ಸಮಾಜಕ್ಕೆ ಡಾ.ರಾಮಕೃಷ್ಣಯ್ಯ, ಡಾ.ರಾಜಪ್ಪ ದಳವಾಯಿ, ಲಕ್ಷ್ಮಿ ಚಂದ್ರಶೇಖರ್, ಶಶಿಧರ್ ಬಾರಿಘಾಟ್, ಡಿಂಗ್ರಿ ನರೇಶ್, ಮಹಂತೇಶ್ ಗಜೇಂದ್ರ ಘಡ, ಸುರೇಶ್ ಬಾಬು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅಜ್ಜಿನಕೊಂಡ ಮಹೇಶ ನಾಚ್ಚಯ್ಯ ನೇಮಕವಾಗಿದ್ದಾರೆ.

ಈ ಎಲ್ಲ ಅಕಾಡೆಮಿ ಮತ್ತು ಪ್ರಾಧಿಕಾರದ ನೂತನ ಅಧ್ಯಕ್ಷ ಮತ್ತು ಸದಸ್ಯರ ಅವಧಿಯು ಮುಂದಿನ ಮೂರು ವರ್ಷಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಇರಲಿದೆ ಎಂದು ಸರಕಾರವು ಅಧಿಸೂಚನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News