×
Ad

‘ಇವ್ರು ನನ್ನನ್ನು ಮಂತ್ರಿಯನ್ನೇ ಮಾಡಲಿಲ್ಲ, ಇನ್ನೂ ಸಿಎಂ ಮಾಡ್ತಾರಾ?’: ಸ್ವಪಕ್ಷದ ವಿರುದ್ಧ ಯತ್ನಾಳ್ ಪರೋಕ್ಷ ಆಕ್ರೋಶ

Update: 2023-12-14 18:42 IST

ಬೆಳಗಾವಿ: ‘ಇವ್ರು (ಬಿಜೆಪಿಯವರು) ನನ್ನನ್ನು ಮಂತ್ರಿಯನ್ನೇ ಮಾಡಲಿಲ್ಲ, ಇನ್ನೂ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆಯೇ, ನೀವೂ ಚೆನ್ನಾಗಿ ಮಾತನಾಡ್ತೀರೀ?’ ಎಂದು ಬಿಜೆಪಿ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಸ್ವಪಕ್ಷದ ವಿರುದ್ಧವೇ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಬಿ.ಆರ್.ಪಾಟೀಲ್, ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಯತ್ನಾಳ್, ‘ನಮ್ಮಲ್ಲಿ ಕೆಲವರು ಹೊಸದಿಲ್ಲಿಗೆ ಹೋಗಿ ಅವರಿವರ ಕೈಕಾಲು ಹಿಡಿದು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ, ನನಗೆ ಅದ್ಯಾವುದು ಬರುವುದಿಲ್ಲ. ಹೀಗಾಗಿ ನಾನು ಮಂತ್ರಿಯೇ ಆಗಲಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News