×
Ad

ಕೆಎಸ್ಸಾರ್ಟಿಸಿಗೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ

Update: 2023-11-23 21:34 IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಗೆ ಪ್ರತಿಷ್ಠಿತ ಮೂರು ಅಂತರ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ನಿಗಮವು ಜಾರಿ ಮಾಡಿದ ವಿನೂತನ ವಾಹನಗಳ ಪುನಶ್ಚೇತನ ಯೋಜನೆ ಉಪಕ್ರಮ ಹಾಗೂ ಅಂಬಾರಿ ಉತ್ಸವ, ಪಲ್ಲಕ್ಕಿ ಮತ್ತು ವಿದ್ಯುತ್ ವಾಹನಗಳ ಬ್ರಾಂಡಿಂಗ್ ಉಪಕ್ರಮಕ್ಕಾಗಿ ನ್ಯಾಷನಲ್ ಮೀಡಿಯಾ ಕಾನ್ಲ್ಕೇವ್‍ನ ಎರಡು ಪ್ರಶಸ್ತಿ ಹಾಗೂ ವಲ್ರ್ಡ್ ಮಾರ್ಕೆಟಿಂಗ್ ಕಾಂಗ್ರೆಸ್‍ನ ಗ್ಲೋಬಲ್ ಮಾರ್ಕೆಟಿಂಗ್ ಎಕ್ಸೆಲೆನ್ಸ್ ಪ್ರಶಸ್ತಿ ದೊರಕಿದೆ.

ಭುವನೇಶ್ವರದಲ್ಲಿ ನ್ಯಾಷನಲ್ ಮೀಡಿಯಾ ಕಾನ್ಲ್ಕೇವ್ ಹಾಗೂ ಮುಂಬೈನಲ್ಲಿ ವಲ್ರ್ಡ್ ಮಾರ್ಕೆಟಿಂಗ್ ಕಾಂಗ್ರೆಸ್ ಸಮಾರಂಭ ಆಯೋಜಿಸಿ ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಬಿ.ಜಯಕರ ಶೆಟ್ಟಿ, ಎಂ.ಜಗದೀಶ್, ಮಂಗಳೂರು ವಿಭಾಗ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News