×
Ad

ಕಾಲ್ತುಳಿತ ದುರಂತ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಮೂರು ಪಂದ್ಯ ಸ್ಥಳಾಂತರ

Update: 2025-06-10 20:19 IST

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ಪರಿಣಾಮ ನವೆಂಬರ್ 13ರಿಂದ 19ರವರೆಗೆ ಇಲ್ಲಿ ನಡೆಯಬೇಕಿದ್ದ ಕ್ರಿಕೆಟ್ ಪಂದ್ಯಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬೇರೆಡೆ ಸ್ಥಳಾಂತರ ಮಾಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನವೆಂಬರ್ 13ರಿಂದ 19ರ ವರೆಗೆ ಭಾರತ-ಎ ಮತ್ತು ದಕ್ಷಿಣ ಆಫ್ರಿಕಾ-ಎ ನಡುವಣ ಮೂರು ಏಕದಿನ ಪಂದ್ಯಗಳ ಆಯೋಜನೆ ಮಾಡಲಾಗಿತ್ತು. ಇದೀಗ ಈ ಪಂದ್ಯಗಳನ್ನು ಬೆಂಗಳೂರಿನಿಂದ ರಾಜ್‍ಕೋಟ್‍ಗೆ ಸ್ಥಳಾಂತರಿಸಿ ಬಿಸಿಸಿಐ ಪ್ರಕಟನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News