×
Ad

“ಅಮೆರಿಕಕ್ಕೆ ಮರಳುವ ಸಮಯ ಬಂದಿದೆ”: ಬೆಂಗಳೂರಿನಲ್ಲಿ ಕಂಪೆನಿ ನೋಂದಾಯಿಸಲು ತಡವಾಗುತ್ತಿದೆ ಎಂದು ದೂರಿದ ಉದ್ಯಮಿ

Update: 2023-07-29 21:32 IST

ಸಾಂದರ್ಭಿಕ ಚಿತ್ರ 

ಬೆಂಗಳೂರು: ಬೆಂಗಳೂರು ಮೂಲದ ಕಂಪನಿಯ ಸಂಸ್ಥಾಪಕ ಬ್ರಿಜ್ ಸಿಂಗ್ ಎಂಬವರು ತಮ್ಮ ಸಂಸ್ಥೆಯನ್ನು ನೋಂದಾಯಿಸಲು ಎದುರಿಸುತ್ತಿರುವ ಸಂಕಷ್ಟವನ್ನು ಹಂಚಿಕೊಂಡಿದ್ದು, ಅಮೆರಿಕಕ್ಕೆ ಮರಳಲು ಸಮಯವಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅವರು ಎರಡು ತಿಂಗಳು ಕಳೆದರೂ ತನ್ನ ಕಂಪೆನಿಯನ್ನು ನೊಂದಾಯಿಸಲು ಸಾಧ್ಯವಾಗುತ್ತಿಲ್ಲ. ನಾನು ಅಮೆರಿಕಕ್ಕೆ ಮರಳುವ ಸಮಯ ಬಂದಿದೆ. ಇದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

“ಬೆಂಗಳೂರು / ಭಾರತದ ಬಗ್ಗೆ ಪ್ರೀತಿಯಿದೆ. ಭಾರತದಲ್ಲಿ ಸಂಸ್ಥೆಯನ್ನು ನೋಂದಾಯಿಸಲು 2 ತಿಂಗಳುಗಳ ಕಾಲ ಪ್ರಯತ್ನಿಸಿದರೂ ಇನ್ನೂ ಪೂರ್ಣಗೊಂಡಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News