×
Ad

ಸಂಚಾರ ಉಲ್ಲಂಘನೆ ದಂಡ: ಮತ್ತೊಮ್ಮೆ ಶೇ.50ರಷ್ಟು ರಿಯಾಯಿತಿ ಘೋಷಣೆ

Update: 2025-11-20 19:57 IST

ಸಾಂದರ್ಭಿಕ ಚಿತ್ರ 

ಬೆಂಗಳೂರು : ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್‍ನಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಶೇಕಡ 50 ರಷ್ಟು ಮಾತ್ರ ದಂಡ ಪಾವತಿಗೆ ರಿಯಾಯಿತಿ ಪ್ರಕಟಿಸಲಾಗಿದೆ.

ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20ರ ಅವಧಿಯಲ್ಲಿ ದಾಖಲಾಗಿ ಪಾವತಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಷ್ಟು ಮಾತ್ರ ರಿಯಾಯಿತಿ ನೀಡಿ ಬಾಕಿ ಮೊತ್ತವನ್ನು ಪಾವತಿಸಲು ತಿಳಿಸಲಾಗಿದೆ.

ನಾಳೆಯಿಂದ(ನ.21) ಮುಂದಿನ ತಿಂಗಳು ಡಿಸೆಂಬರ್ 12ರವರೆಗೆ ದಂಡ ಪಾವತಿಗೆ ಕಾಲಾವಕಾಶ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News