×
Ad

7 ಡಿವೈಎಸ್ಪಿ, 55 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

Update: 2024-10-19 18:13 IST

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪರ್ವ ಶುರುವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ 7 ಡಿವೈಎಸ್ಪಿ ಹಾಗೂ 55 ಪೊಲೀಸ್ ಇನ್ಸ್‌ಪೆಕ್ಟರ್‌ಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ 7 ಮಂದಿ ಡಿವೈಎಸ್ಪಿ ಹಾಗೂ 55 ಇನ್ಸ್‌ಪೆಕ್ಟರ್‌ಳನ್ನು ವಿವಿಧೆಡೆ ವರ್ಗಾಯಿಸಲಾಗಿದೆ. ಡಿವೈಎಸ್ಪಿಗಳಾದ ಕೆ.ಎಂ.ಸತೀಶ್ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗಕ್ಕೆ ವರ್ಗಾಯಿಸಿದರೆ, ಗೋಪಾಲ್ ನಾಯಕ್ ಅವರನ್ನು ಬೆಂಗಳೂರಿನ ಬಿಎಂಟಿಎಫ್‍ಗೆ ವರ್ಗಾಯಿಸಲಾಗಿದೆ.

ಉಳಿದ, ಡಿವೈಎಸ್ಪಿಗಳನ್ನು ರಾಜ್ಯದ ಇತರ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ. 55 ಮಂದಿ ಇನ್ಸ್‌ಪೆಕ್ಟರ್‌ ಗಳ ಪೈಕಿ ಜೆ.ಎಂ.ರೇಣುಕಾ ವೈಟ್‍ಫೀಲ್ಡ್ ಠಾಣೆಗೆ ವರ್ಗಾವಣೆಗೊಂಡರೆ, ಲಿಂಗರಾಜು ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News