×
Ad

ಸತ್ಯಕ್ಕೆ ಹಿನ್ನೆಡೆ ಇರಬಹುದು ಆದರೆ ಅಂತ್ಯವಿಲ್ಲ: ಕಾಂಗ್ರೆಸ್

Update: 2023-08-07 13:39 IST

ರಾಹುಲ್ ಗಾಂಧಿಯವರ ಸಂಸದ ಸ್ಥಾನ ಮರುಸ್ಥಾಪನೆಯಾಗಿರುವುದು ಕಾಂಗ್ರೆಸ್ ನ ಪ್ರತಿಯೊಂದು ವಲಯದಲ್ಲೂ ಸಂತೋಷವನ್ನುಂಟುಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಸತ್ಯಕ್ಕೆ ಹಿನ್ನೆಡೆ ಇರಬಹುದು, ಸತ್ಯಕ್ಕೆ ಅಂತ್ಯವಿರುವುದಿಲ್ಲ. ರಾಹುಲ್ ಗಾಂಧಿಯವರನ್ನು ಯಾವ ಯಾವ ಬಗೆಯಲ್ಲಿ ತುಳಿಯಲು ಯತ್ನಿಸಿದರೂ ಪುಟಿದು ಮೇಲೆದ್ದು ಬರುತ್ತಾರೆ. ಏಕೆಂದರೆ ಅವರೊಂದಿಗೆ ನ್ಯಾಯವಿದೆ, ಸತ್ಯವಿದೆ. ಭ್ರಷ್ಟರಿಗೆ ದುಃಸ್ವಪ್ನವಾಗಿ ಮತ್ತೊಮ್ಮೆ ಸಂಸತ್ತಿಗೆ ಸಿಂಹದಂತೆ ಕಾಲಿಡುತ್ತಿದ್ದಾರೆ ಎಂದು ಹೇಳಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ನೆರಳಲ್ಲಿ ಭಾರತ ಇರುವಾಗ ಸತ್ಯವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಇನ್ನಷ್ಟು ಪ್ರಶ್ನೆಗಳೊಂದಿಗೆ, ಇನ್ನಷ್ಟು ಆತ್ಮವಿಶ್ವಾಸದೊಂದಿಗೆ, ಇನ್ನಷ್ಟು ದೃಢತೆಯೊಂದಿಗೆ ರಾಹುಲ್ ಗಾಂಧಿ ಸಂಸತ್ತಿಗೆ ಮತ್ತೊಮ್ಮೆ ಕಾಲಿಡುತ್ತಿದ್ದಾರೆ. ಆದರೆ "ಐಷಾರಾಮಿ ಫಕೀರ" ಸಂಸತ್ತಿನ ಕಡೆ ತಲೆ ಹಾಕಿಲ್ಲ ಎಂದು ಟ್ವೀಟ್ ಮಾಡಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News