×
Ad

ತುಮಕೂರು: ಬಾವಿಗೆ ಬಿದ್ದ ತಂಗಿಯನ್ನು ರಕ್ಷಿಸಿದ 8 ವರ್ಷದ ಸಹೋದರಿ!

Update: 2023-07-14 12:45 IST

ಹಿಮಾಂಶು ಹಾಗೂ ಶಾಲು

ತುಮಕೂರು: ಆಟವಾಡುತ್ತ ಬಾವಿಗೆ ಬಿದ್ದಿದ್ದ ತಂಗಿಯನ್ನು 8 ವರ್ಷದ ಅಕ್ಕ ರಕ್ಷಿಸಿರುವ ಘಟನೆಯೊಂದು ತುಮಕೂರಿನ ಕುಚ್ಚಂಗಿಯಲ್ಲಿ ಗುರುವಾರ ವರದಿಯಾಗಿದೆ.

ಆಟವಾಡುತ್ತ ಬಾವಿಗೆ ಬಿದ್ದಿದ್ದ ತಂಗಿ ಹಿಮಾಂಶುವನ್ನು ಅಕ್ಕ ಶಾಲೂ ಜೀವದ ಹಂಗು ತೊರೆದು ರಕ್ಷಿಸಿದ್ದಾಳೆಂದು ಹೇಳಲಾಗಿದೆ. 

ಉತ್ತರ ಪ್ರದೇಶ ಮೂಲದ ದಂಪತಿ ಕುಚ್ಚಂಗಿ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದರು. ದಂಪತಿಗೆ ನಾಲ್ವರು ಮಕ್ಕಳು ಎಂದು ಹೇಳಲಾಗಿದೆ. 

ಹಿಮಾಂಶು ಹಾಗೂ ಕಪಿಲ್ ತೋಟದಲ್ಲಿ ಆಟವಾಡುತ್ತಾ ಇದ್ದಾಗ ಬಾವಿಗೆ ಚಂದು ಬಿದ್ದಿದೆ. ಬಾವಿಯಲ್ಲಿ ಬಿದ್ದಿದ್ದ ಚೆಂಡು ತೆಗೆಯಲು ಹೋಗಿ ಹಿಮಾಂಶು ನೀರಿನಲ್ಲಿ ಮೂಳುಗುವ ಹಂತಕ್ಕೆ ತಲುಪಿದ್ದಾಳೆ. ಇದನ್ನು ಕಂಡ ಶಾಲೂ ಮನೆಯೊಳಗಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಜಿಗಿದು ತಂಗಿಯನ್ನು ರಕ್ಷಿಸಿದ್ದಾಳೆನ್ನಲಾಗಿದೆ. ಈ ವೇಳೆ ಆಕೆ ಸಹಾಯಕ್ಕೆ ಬಂದ ಅಕ್ಕ-ಪಕ್ಕದ ಜನರು ಇಬ್ಬರು ಮಕ್ಕಳನ್ನು ಬಾವಿಯಿಂದ ಮೇಲಕೆತ್ತಿದ್ದಾರೆ ಎಂದು ಹೇಳಲಾಗಿದೆ. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News