×
Ad

ತುಮಕೂರು| ಕಿರುಕುಳ ಆರೋಪ: ಒಂದೇ ಕುಟುಂಬದ ಐವರು ಆತ್ಮಹತ್ಯೆ

Update: 2023-11-26 22:15 IST

ತುಮಕೂರು: ಸಾಲಬಾಧೆ ಹಾಗು ಅಕ್ಕಪಕ್ಕದವರ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸದಾಶಿವನಗರದಲ್ಲಿ ನಡೆದಿದೆ.

ಸದಾಶಿವ ನಗರದ ನಿವಾಸಿಗಳಾದ ಗರೀಬ್‌ ಸಾಬ್‌ (32), ಸುಮಯ್ಯ (30), ಹಾಜಿರಾ, ಮುಹಮ್ಮದ್‌ ಶುಭಾನ್‌ ಮತ್ತು ಮುಹಮ್ಮದ್‌ ಮುನೀರ್‌ ಮೃತರು.

ಸದಾಶಿವ ನಗರದಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದ ಗರೀಬ್ ಸಾಬ್ ಎಂಬವರು ಮೂಲತಃ ಶಿರಾ ತಾಲೂಕಿನ ಚಿಕ್ವಕನಹಳ್ಗಿಯವರಾಗಿದ್ದು, ತಮ್ಮ ಇಬ್ಬರು ಪುತ್ರರು, ಓರ್ವ ಪುತ್ರಿಯ ವಿಧ್ಯಾಭ್ಯಾಸಕ್ಕಾಗಿ ತುಮಕೂರು ನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.

ಆತ್ಮಹತ್ಯೆಗೆ ಮುನ್ನ ವಿಡಿಯೋ ಒಂದನ್ನು ಮಾಡಿದ್ದು, ತಮ್ಮ ಸಾವಿಗೆ ಅಕ್ಕಪಕ್ಕದ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಅಶೋಕ್, ಎಎಸ್ಪಿ ಮರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News