×
Ad

ಧರ್ಮಸ್ಥಳ ಪ್ರಕರಣ | ಎಸ್‍ಐಟಿ ವರದಿ ಮುನ್ನವೇ ನ್ಯಾಯಾಧೀಶರಾಗುವುದು ಬೇಡ : ಯು.ಟಿ.ಖಾದರ್

Update: 2025-08-29 21:23 IST

ಬೆಂಗಳೂರು, ಆ.29 : ಧರ್ಮಸ್ಥಳ ಪ್ರಕರಣ ಸಂಬಂಧ ಎಸ್‍ಐಟಿ ತನಿಖೆ ನಡೆಯುತ್ತಿದ್ದು, ವರದಿಗಾಗಿ ಕಾಯೋಣ. ಆದರೆ, ಇದಕ್ಕೂ ಮೊದಲು ನಾವು ನ್ಯಾಯಾಧೀಶರಂತೆ ವರ್ತನೆ ಮಾಡುವುದು ಬೇಡ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‍ಐಟಿ ಧರ್ಮಸ್ಥಳ ಪ್ರಕರಣದಲ್ಲಿ ಗಂಭೀರ ತನಿಖೆ ನಡೆಸುತ್ತಿದೆ. ಆ ವರದಿ ಬರುವರೆಗೂ ಕಾಯಬೇಕಾಗಿದೆ.ಅಲ್ಲಿಯವರೆಗೂ ಯಾರು ಸಹ ತೀರ್ಮಾನ ನೀಡುವುದು, ನ್ಯಾಯಾಧೀಶರಂತೆ ವರ್ತನೆ ಮಾಡುವುದು ಅವಶ್ಯಕತೆ ಇಲ್ಲ ಎಂದರು.

ತನಿಖಾ ವರದಿ ಬರುವವರೆಗೂ ಯಾರೂ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಬಾರದು. ಕ್ಷೇತ್ರದ ಪಾವಿತ್ರ್ಯತೆ ಮತ್ತು ಧಾರ್ಮಿಕ ಭಾವನೆಗಳು ಮುಖ್ಯ ಎಂದು ಖಾದರ್ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News