×
Ad

ಉತ್ತರ ಪ್ರದೇಶ | ಭೀಕರ ರಸ್ತೆ ಅಪಘಾತ: ಮಹಾ ಕುಂಭಮೇಳಕ್ಕೆ ತೆರಳಿದ್ದ ಬೀದರ್​ನ ಐವರು ಮೃತ್ಯು

Update: 2025-02-21 12:55 IST

ಬೀದರ್ : ಉತ್ತರಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಸಾಗುತ್ತಿದ್ದಾಗ ಭೀಕರ ರಸ್ತೆ ಅಪಘಾತ ಸಂಭವಿಸಿ ಬೀದರ್‌ನ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಲಡಗೇರಿ ನಿವಾಸಿಗಳಾದ ಲಕ್ಷ್ಮಿ (57), ನಿಲಮ್ಮಾ (62), ಸಂತೋಷಕುಮಾರ್ (45), ಸುನಿತಾ (40) ಹಾಗೂ ಕಲಾವತಿ ಎಂದು ಗುರುತಿಸಲಾಗಿದೆ.

ಫೆ.18ರಂದು ಮಧ್ಯಾಹ್ನ ಬೀದರ್‌ನಿಂದ ಕ್ರೂಸರ್ ವಾಹನದಲ್ಲಿ 14 ಜನ ಪ್ರಯಾಗ್‌ ರಾಜ್‌ಗೆ ಹೊರಟಿದ್ದರು. ಇಂದು(ಫೆ.21) ಬೆಳಿಗ್ಗೆ ವಾರಾಣಾಸಿ ಜಿಲ್ಲೆಯ ಮಿರ್ಜಾ ಮುರಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೂಪಾಪುರ್ ಬಳಿ ಸಾಗುತ್ತಿದ್ದ ಕ್ರೂಸರ್ ವಾಹನ ಲಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಥಳದಲ್ಲೇ ಐವರು ಮೃತಪಟ್ಟಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ವಾರಾಣಾಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News