×
Ad

ವಿಜಯಪುರ: ಮೂಟೆ ತುಂಬುವ ಯಂತ್ರ ಕುಸಿದು ಮೂವರು ಕಾರ್ಮಿಕರು ಮೃತ್ಯು

Update: 2023-12-05 10:31 IST

ವಿಜಯಪುರ: ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳ ಅಡಿ ಸಿಲುಕಿ ಕಾರ್ಮಿಕರು ಮೃತಪಟ್ಟಿರುವ ಘಟನೆ ವಿಜಯಪುರ ನಗರದ ರಾಜಗುರು ಫುಡ್ಸ್ ಗೋದಾಮಿನಲ್ಲಿ ನಡೆದಿದೆ.

ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಗೋದಾಮಿನಲ್ಲಿ ನೂರಾರು ಚೀಲಗಳ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದು, ಗೋಣಿ ಚೀಲಗಳ ಅಡಿಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ.

ರಾಜೇಶ್ ಮುಖಿಯಾ(25), ರಾಮಬ್ರೀಜ್ ಮುಖಿಯಿ (29), ಶಂಭು ಮುಖಿಯಾ (26) ಮೃತ ಕಾರ್ಮಿಕರು. 10 ರಿಂದ 12 ಜನ ಕಾರ್ಮಿಕರು ಗೋದಾಮಿನೊಳಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಥಳದಲ್ಲಿ ಕಲಬುರಗಿಯ SDRF ತಂಡದಿಂದ ರಕ್ಷಾಣಾ ಕಾರ್ಯಾಚರಣೆ ನಡೆಯುತ್ತಿದೆ. 26 ಜನರ ತಂಡದಿಂದ ಸಂಸ್ಕರಣಾ ಯುನಿಟ್ ಕೆಳಗೆ ಸಿಕ್ಕಿರುವ ಕಾರ್ಮಿಕರಿಗಾಗಿ ಹುಡುಕಾಟ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News