×
Ad

ರಾಜಕೀಯ ಬಿಟ್ಟು ರಾಜ್ಯದ ಆಡಳಿತದ ಕಡೆ ಗಮನ ಕೊಡಿ : ವಿಜಯೇಂದ್ರ

Update: 2025-12-02 19:55 IST

ಬೆಂಗಳೂರು : ‘ನಿಮ್ಮ ಸ್ವಾರ್ಥ ರಾಜಕೀಯದ ಪರಿಸ್ಥಿತಿ ಉತ್ತಮಗೊಳಿಸಲು, ನೀವುಗಳು ನಡೆಸುತ್ತಿರುವ ಉಪಹಾರ ಕೂಟಗಳನ್ನು ಬದಿಗಿಟ್ಟು, ರಾಜ್ಯದ ಹದಗೆಟ್ಟಿರುವ ಮೂಲಸೌಕರ್ಯಗಳತ್ತ ಗಮನಹರಿಸಿ. ರಾಜಕೀಯ ಬಿಟ್ಟು ರಾಜ್ಯದ ಆಡಳಿತದ ಕಡೆ ಗಮನ ಕೊಡಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಮಂಗಳವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ರಸ್ತೆ ಗುಂಡಿಗಳು. ಕಾಂಗ್ರೆಸ್ ಸರಕಾರದ ದುರಾಡಳಿತ, ಶೂನ್ಯ-ಅಭಿವೃದ್ಧಿಗೆ ರಾಜ್ಯದ ರಸ್ತೆಗಳೇ ಕನ್ನಡಿ ಹಿಡಿಯುತ್ತಿವೆ’ ಎಂದು ಗಮನ ಸೆಳೆದಿದ್ದಾರೆ.

‘ಬಲಿ ಪೀಠದಂತಾಗಿರುವ ರಸ್ತೆಗುಂಡಿಗಳು ಅಮಾಯಕ ನಾಗರಿಕರ ಜೀವಕ್ಕೆ ಸಂಚಕಾರ ಒಡ್ಡಿ, ನೂರಾರು ಜನರ ಪ್ರಾಣವನ್ನೇ ಆಹುತಿ ತೆಗೆದುಕೊಂಡಿದೆ. ಇದಕ್ಕೆ ಈ ಭ್ರಷ್ಟ ಕಾಂಗ್ರೆಸ್ ಸರಕಾರದ ದುರಾಡಳಿತವೇ ನೇರ ಕಾರಣ. ಅಭಿವೃದ್ಧಿಯ ಮಾತಿರಲಿ, ಕೇವಲ 11 ತಿಂಗಳಲ್ಲಿ, 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬಲಿಯಾದವರ ಸಂಖ್ಯೆ 558.

ಇದೇ ಈ ಕಾಂಗ್ರೆಸ್ ಸರಕಾರದ ಸಾಧನೆ. ಅಮಾಯಕ ನಾಗರಿಕರ ಪ್ರಾಣಹಾನಿಗೆ ಉತ್ತರದಾಯಿ ಯಾರು ಮುಖ್ಯಮಂತ್ರಿಗಳೇ? ಜನರ ಪ್ರಾಣಕ್ಕೆ ಕುತ್ತು ತರುತ್ತಿರುವ ರಸ್ತೆಗಳನ್ನು ಸರಿಪಡಿಸಲಾಗದ ಈ ಕಾಂಗ್ರೆಸ್ ಸರಕಾರಕ್ಕೆ ಜನರೇ ಛೀಮಾರಿ ಹಾಕುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News