ಪೂಜ್ಯ ತಂದೆಗೆ ಪಕ್ಷ ಮುನ್ನಡೆಸಲು ಜಿಪಿಎ ಕೊಟ್ಟ ವಿಜಯೇಂದ್ರ: ಯತ್ನಾಳ್ ವ್ಯಂಗ್ಯ
ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಪಕ್ಷ ನಡೆಸಲು ಅಸಮರ್ಥರಾಗಿರುವ ವಿಜಯೇಂದ್ರ ಅವರು ತಮ್ಮ ಪೂಜ್ಯ ತಂದೆಗೆ ಪಕ್ಷವನ್ನು ಮುನ್ನೆಡಸಲು, ನಿರ್ಧಾರಗಳನ್ನು ಕೈಗೊಳ್ಳಲು ಜಿಪಿಎ ಕೊಟ್ಟಿದ್ದಾರೆ ಎಂದು ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಇಳಿ ವಯಸ್ಸಿನಲ್ಲಿ ಪೂಜ್ಯನೀಯರು ನಿತ್ಯ ಕಚೇರಿಗೆ ಬಂದು ಸಭೆ/ಸಮಾಲೋಚನೆ ನಡೆಸುವ ಪರಿಸ್ಥಿತಿ ಬಂದೊದಗಿದೆ. ರಾಜ್ಯಾಧ್ಯಕ್ಷರು ಮಾಡಬೇಕಾದ ಪ್ರವಾಸವನ್ನು ತಂದೆಯವರು ಮಾಡುತ್ತಾರಂತೆ ಎಂದು ಕಿಚಾಯಿಸಿದ್ದಾರೆ.
ಪಾರ್ಲಿಮೆಂಟರಿ ಬೋರ್ಡ್ ಸಭೆಗೆ ಆಹ್ವಾನವಿಲ್ಲದವರು ರಾಷ್ಟ್ರೀಯ ಪಕ್ಷವನ್ನು ಮುನ್ನಡೆಸುವ ಪರಿಸ್ಥಿತಿ ಬಂದಿರುವುದು ಶೋಚನೀಯ. ಒಟ್ಟಿನಲ್ಲಿ ಪೂಜ್ಯ ತಂದೆಯವರ ಅಣತಿಯಂತೆ ರಾಜ್ಯ ಬಿಜೆಪಿ ನಡೆಯುತ್ತಿರುವ ಸತ್ಯವನ್ನು ಯಾರು ಮರೆಮಾಚುವಂತಿಲ್ಲ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಪಕ್ಷ ನಡೆಸಲು ಅಸಮರ್ಥರಾಗಿರುವ ವಿಜಯೇಂದ್ರ ಅವರು ತಮ್ಮ ಪೂಜ್ಯ ತಂದೆಗೆ ಪಕ್ಷವನ್ನು ಮುನ್ನೆಡಸಲು, ನಿರ್ಧಾರಗಳನ್ನು ಕೈಗೊಳ್ಳಲು GPA ಕೊಟ್ಟಿದ್ದಾರೆ. ಇಳಿವಯಸ್ಸಿನಲ್ಲಿ ಪೂಜ್ಯನೀಯರು ನಿತ್ಯ ಕಚೇರಿಗೆ ಬಂದು ಸಭೆ/ಸಮಾಲೋಚನೆ ನಡೆಸುವ ಪರಿಸ್ಥಿತಿ ಬಂದೊದಗಿದೆ.
— Basanagouda R Patil (Yatnal) (@BasanagoudaBJP) June 24, 2025
ರಾಜ್ಯಾಧ್ಯಕ್ಷರು ಮಾಡಬೇಕಾದ ಪ್ರವಾಸವನ್ನು ತಂದೆಯವರು ಮಾಡುತ್ತಾರಂತೆ.… pic.twitter.com/Csr7gx4QgE