×
Ad

ಗ್ರಾಮ ಆಡಳಿತಾಧಿಕಾರಿ | ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ

Update: 2024-05-04 19:46 IST

ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಅರ್ಜಿ ಅಲ್ಲಿಸಲು ಮೇ 4 ಕೊನೆಯ ದಿನವಾಗಿತ್ತು. ಆದರೂ ಸಾರ್ವಜನಿಕರ ಮನವಿ ಮೇರೆಗೆ ದಿನಾಂಕ ವಿಸ್ತರಿಸಲಾಗಿದೆ. ಶುಲ್ಕ ಪಾವತಿಸಲು ಮೇ 18 ಕೊನೆಯ ದಿನವಾಗಿದೆ. ಒಂದು ಸಾವಿರ ಖಾಲಿ ಹುದ್ದೆಗಳಿಗೆ ಇದುವರೆಗೂ ಒಂಬತ್ತು ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ ನಾಲ್ಕು ಲಕ್ಷ ಮಂದಿ ಶುಲ್ಕ ಪಾವತಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಡಿಸಿಇಟಿಗೆ ಅರ್ಜಿ ಆಹ್ವಾನ: ಡಿಪ್ಲೊಮಾ ವ್ಯಾಸಂಗ ಮಾಡಿರುವವರು ಎಂಜಿನಿಯರಿಂಗ್ ಕೋರ್ಸ್‍ನ ಮೂರನೇ ಸೆಮಿಸ್ಟರ್ ಗೆ ನೇರ ಪ್ರವೇಶ ಕಲ್ಪಿಸುವ ಸಂಬಂಧ ಕೆಇಎ ಡಿಸಿಇಟಿ-24 ಪರೀಕ್ಷೆ ನಡೆಸುತ್ತಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನವಾಗಿದೆ. ಶುಲ್ಕ ಪಾವತಿಗೆ ಮೇ 18 ಕೊನೆ ದಿನ. ಪರೀಕ್ಷಾ ದಿನಾಂಕವನ್ನು ನಂತರದ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News