×
Ad

ಚಿತ್ರನಟಿ ರಮ್ಯಾಗೆ ಅಶ್ಲೀಲ ಸಂದೇಶ ಪ್ರಕರಣ: ಎಫ್‍ಎಸ್‍ಎಲ್‍ಗೆ 12 ಆರೋಪಿಗಳ ಮೊಬೈಲ್

Update: 2025-10-06 20:14 IST

ನಟಿ ರಮ್ಯಾ (Photo credit: instagram/divyaspandana)

ಬೆಂಗಳೂರು: ಚಿತ್ರನಟಿ, ಮಾಜಿ ಸಂಸದೆ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಮೊಬೈಲ್‍ನಿಂದ ಅಳಿಸಿ ಹಾಕಿದ್ದ ದತ್ತಾಂಶ ಮರುಸಂಗ್ರಹಿಸಲು 12 ಆರೋಪಿಗಳ ಮೊಬೈಲ್ ಪೋನ್‍ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‍ಎಸ್‍ಎಲ್) ಕಳುಹಿಸಿದ್ದಾರೆ.

ಆರೋಪಿಗಳ ಖಾತೆಗಳು, ಸಂದೇಶಗಳನ್ನು ಮರು ಸಂಗ್ರಹಿಸಬೇಕಿದ್ದು, ವರದಿ ಬಂದ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆಯ ಘನತೆ, ಗೌರವಕ್ಕೆ ಧಕ್ಕೆಯಾಗುವಂತೆ ಪೋಸ್ಟ್ ಮಾಡಿದ ಪ್ರಕರಣದಡಿ ರಮ್ಯಾ ಅವರು ನೀಡಿದ್ದ ದೂರನ್ನು ಆಧರಿಸಿ ಈವರೆಗೂ 12 ಆರೋಪಿಗಳನ್ನು ಸಿಸಿಬಿ ಬಂಧಿಸಿತ್ತು. ಸದ್ಯ ಈ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News