×
Ad

ವಕ್ಫ್ ನೋಟಿಸ್ ಹಿಂಪಡೆಯುತ್ತೇವೆಂದ ಮೇಲೆ ವಿವಾದ ಮುಗಿಯಿತು : ಜಿ.ಪರಮೇಶ್ವರ್

Update: 2024-11-03 18:00 IST
ಪರಮೇಶ್ವರ್

ಬೆಂಗಳೂರು : ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ನೋಟಿಸ್ ಅಂತೇನಿಲ್ಲ, ನೋಟಿಸ್ ಕೊಟ್ಟಿದ್ದಾರೆ. ಅದನ್ನು ಹಿಂಪಡೆಯುತ್ತೇವೆ ಅಂದ ಮೇಲೆ ಯಾವ ವಿವಾದವೂ ಇಲ್ಲ, ಎಲ್ಲವೂ ಮುಗಿಯಿತು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್‌ನಿಂದ ತಾತ್ಕಾಲಿಕ ನೋಟಿಸ್ ಕೊಡಲಾಗಿತ್ತು ಎಂಬ ಝಮೀರ್ ಅಹ್ಮದ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದು ತಾತ್ಕಾಲಿಕ ಅಂತ ಏನಿಲ್ಲ, ನೋಟಿಸ್ ಕೊಟ್ಟಿದ್ದಾರೆ. ಅದನ್ನು ಹಿಂಪಡೆಯುತ್ತೇವೆ ಅಂದ ಮೇಲೆ ಮುಗಿಯಿತು. ಈ ವಿಚಾರವನ್ನು ಬಿಜೆಪಿಯವರು ಪ್ರತಿಭಟನೆ ಮಾಡಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ ಎಂದರು.

ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್‍ನಿಂದ ನೋಟಿಸ್ ಕೊಟ್ಟಿದ್ದರೆ ವಾಪಸ್ ತಗೊಳ್ಳಿ ಎಂದು ಸೂಚಿಸಿದ್ದಾರೆ. ಇಲ್ಲಿಗೆ ಇದೆಲ್ಲವೂ ಸ್ಥಗಿತವಾಗಲಿದೆ ಎಂದು ಜಿ.ಪರಮೇಶ್ವರ್ ಹೇಳಿದರು.

ಬಿಜೆಪಿಯವರು ರಾಜಕೀಯ ದುರುದ್ದೇಶಕ್ಕೆ ಆರೋಪ ಮಾಡುತ್ತಾರೆ. ಪ್ರತಿಭಟನೆ ಮಾಡುವುದು ಅವರ ಹಕ್ಕು, ಮಾಡಲಿ. ಆದರೆ, ನಾವು ಈ ಸಂಬಂಧ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಂಡಿದ್ದೇವೆ. ಬಿಜೆಪಿಯವರು ರೈತರ ಪರವಾಗಿ ಮೂರು ಕೃಷಿ ಕಾಯ್ದೆಗಳನ್ನು ಮಂಡಿಸಿದ್ದರು. ಅದರಿಂದ ಏನೆಲ್ಲ ತೊಂದರೆ ಆಯಿತು. ಎಷ್ಟು ರೈತರು ಸತ್ತರು, ಬಿಜೆಪಿಯವರ ಸ್ಪಂದನೆ ಹೇಗಿತ್ತು ಅಂತ ವಿವರಿಸಿದರೆ ರೈತರ ಬಗ್ಗೆ ಅವರ ಬದ್ಧತೆ ಏನು ಅನ್ನುವುದು ಗೊತ್ತಾಗುತ್ತದೆ ಎಂದು ಪರಮೇಶ್ವರ್ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News