×
Ad

ರಾಜ್ಯದ ಎಲ್ಲಾ ಅಣೆಕಟ್ಟುಗಳಿಗೆ ಭದ್ರತೆ ಕಲ್ಪಿಸಲು ಜಲಸಂಪನ್ಮೂಲ ಇಲಾಖೆ ನಿರ್ದೇಶನ

Update: 2025-05-08 18:58 IST

ಬೆಂಗಳೂರು : ರಾಷ್ಟ್ರದಲ್ಲಿನ ಪ್ರಸಕ್ತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ, ತುಂಗಭದ್ರಾ, ಹೇಮಾವತಿ, ಆಲಮಟ್ಟಿ, ಭದ್ರಾ, ಸೂಪಾ, ವಾಣಿವಿಲಾಸ ಸಾಗರ, ಲಿಂಗನಮಕ್ಕಿ ಸೇರಿದಂತೆ ರಾಜ್ಯದಲ್ಲಿ ಎಲ್ಲಾ ಜಲಾಶಯಗಳಿಗೆ ಸೂಕ್ತ ಭದ್ರತೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಲಸಂಪನ್ಮೂಲ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಗುರುವಾರ ಈ ಸಂಬಂಧ ಜಲಸಂಪನ್ಮೂಲ ಇಲಾಖೆ ಸರಕಾರದ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ.ಕುಲಕರ್ಣಿ ಪ್ರಕಟಣೆ ಹೊರಡಿಸಿದ್ದು, ‘ರಾಜ್ಯದಲ್ಲಿನ ಎಲ್ಲಾ ಅಣೆಕಟ್ಟುಗಳಿಗೆ ಪೊಲೀಸ್ ಇಲಾಖೆ ಸಮನ್ವಯತೆ ಸಾಧಿಸಿ ತಕ್ಷಣವೇ ಸಾಕಷ್ಟು ಭದ್ರತೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಜತೆಗೆ ಸಂಪೂರ್ಣ ಭದ್ರತೆ ಕಲ್ಪಿಸಬೇಕು. ಒಂದು ವೇಳೆ ಭದ್ರತೆಯನ್ನು ಯಾವುದೇ ರೀತಿಯ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News