×
Ad

ಹಿಂದಿಯನ್ನು ಸಂವಹನದ ಭಾಷೆಯಾಗಿ ಗೌರವಿಸುತ್ತೇವೆ, ಯಜಮಾನಿಕೆಯ ಭಾಷೆಯಾದರೆ ಧಿಕ್ಕರಿಸುತ್ತೇವೆ: ಪ್ರಿಯಾಂಕ್ ಖರ್ಗೆ

"ಭಾಷೆಗಳು ಬಾಂಧವ್ಯ ಬೆಸೆಯುವುದಕ್ಕೆ ಕಾರಣವಾಗಬೇಕೆ ಹೊರತು ಹೇರಿಕೆಯ ಮೂಲಕ ಸಂಘರ್ಷಕ್ಕೆ ಕಾರಣವಾಗಬಾರದು"

Update: 2025-09-15 20:18 IST

ಸಚಿವ ಪ್ರಿಯಾಂಕ್ ಖರ್ಗೆ 

ಬೆಂಗಳೂರು: ಹಿಂದಿಯನ್ನು ಒಂದು ಸಂವಹನದ ಭಾಷೆಯಾಗಿ ಗೌರವಿಸುತ್ತೇವೆ, ಪ್ರೀತಿಸುತ್ತೇವೆ, ಅದೇ ಹಿಂದಿ ದಬ್ಬಾಳಿಕೆಯ ಭಾಷೆಯಾದರೆ, ಯಜಮಾನಿಕೆಯ ಭಾಷೆಯಾದರೆ ಧಿಕ್ಕರಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

‘ಹಿಂದಿ ನ್ಯಾಯಾಂಗ, ಪೊಲೀಸ್, ವಿಜ್ಞಾನ-ತಂತ್ರಜ್ಞಾನದ ಭಾಷೆಯಾಗಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಅವರು, "ನಾನು ಚೆನ್ನಾಗಿ ಹಿಂದಿಯನ್ನು ಮಾತನಾಡಬಲ್ಲೆ, ಅದು ಅಗತ್ಯಕ್ಕೆ ಮಾತ್ರ, ಸಂವಹನಕ್ಕೆ ಮಾತ್ರ" ಎಂದು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕನ್ನಡ ನಮ್ಮ ಆತ್ಮಭಾಷೆ. ಭಾಷೆಗಳು ಬಾಂಧವ್ಯ ಬೆಸೆಯುವುದಕ್ಕೆ ಕಾರಣವಾಗಬೇಕೆ ಹೊರತು ಹೇರಿಕೆಯ ಮೂಲಕ ಸಂಘರ್ಷಕ್ಕೆ ಕಾರಣವಾಗಬಾರದು, ಕೇಂದ್ರ ಸರಕಾರ ಭಾರತದ ಭಾಷಾ ವೈವಿಧ್ಯತೆಯನ್ನು ಗೌರವಿಸಬೇಕು, ಇಲ್ಲದಿದ್ದಲ್ಲಿ ಭಾಷೆಗಳ ಕಾರಣಕ್ಕೆ ಸಂಘರ್ಷ ಉಲ್ಬಣಿಸುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ಧರ್ಮ ರಾಜಕಾರಣದಿಂದ ಆಹಾರ ರಾಜಕಾರಣ, ಭಾಷಾ ರಾಜಕಾರಣದ ಕಡೆ ಹೊರಳಿರುವ ಕೇಂದ್ರ ಸರಕಾರಕ್ಕೆ ಈ ಪ್ರಜ್ಞೆ ಇದ್ದರೆ ಕ್ಷೇಮ ಎಂದು ಪ್ರಿಯಾಂಕ್ ಖರ್ಗೆ ಕಿವಿಮಾತು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News