×
Ad

ತಪ್ಪು ಮಾಡಿಲ್ಲವೆಂದರೆ ಭೈರತಿ ಬಸವರಾಜಗೆ ಆತಂಕ ಏಕೆ?: ಗೃಹ ಸಚಿವ ಡಾ.ಜಿ.ಪರಮೇಶ್ವರ್

Update: 2025-07-18 23:56 IST

ಬೆಂಗಳೂರು: ರೌಡಿ ಬಿಕ್ಲು ಹತ್ಯೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಭೈರತಿ ಬಸವರಾಜ ತಪ್ಪು ಮಾಡಿಲ್ಲವೆಂದರೆ ಅವರಿಗೆ ಆತಂಕ ಏಕೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸವರಾಜ ಅವರ ಪಾತ್ರ ಏನು ಇಲ್ಲ ಎಂಬುದು ತನಿಖೆಯಲ್ಲಿ ಕಂಡು ಬಂದರೆ ಬಿ ರಿಪೋರ್ಟ್ ಸಲ್ಲಿಸುತ್ತಾರೆ. ಇದಕ್ಕೆ ಆತಂಕಪಡುವಂತದ್ದು ಏನು ಇಲ್ಲ ಎಂದರು.

ಮಹಿಳೆಯೊಬ್ಬರು ಠಾಣೆಗೆ ಬಂದು, ತನ್ನ ಮಗನ ಕೊಲೆ ಪ್ರಕರಣದಲ್ಲಿ ಇಂಥವರು ಭಾಗಿಯಾಗಿದ್ದಾರೆ ಎಂದು ದೂರು ಕೊಟ್ಟ ನಂತರ ಭೈರತಿ ಬಸವರಾಜ ಹೊರಗೆ ಸುದ್ದಿಯಲ್ಲಿ ಬಂದಿದ್ದಾರೆ. ಎರಡು ವರ್ಷದಿಂದ ನಮ್ಮ ಸರಕಾರ ಇದೆ. ಬಸವರಾಜ ಯಾವತ್ತಾದರು ಈ ರೀತಿ ಹೊರಗೆ ಸುದ್ದಿಯಲ್ಲಿ ಬಂದಿದ್ದಾರಾ ಎಂದು ಅವರು ಕೇಳಿದರು.

ಏನಾದರೂ ಘಟನೆ ನಡೆದಾಗ, ಯಾರಾದರು ದೂರು ಕೊಟ್ಟಾಗ ಸ್ವಾಭಾವಿಕವಾಗಿ ಹೆಸರು ಬರುತ್ತದೆ. ಆನಂತರ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಶಾಸಕ ಬಸವರಾಜ ಅವರ ಪಾತ್ರ ಏನು ಇಲ್ಲ ಎಂಬುದು ತನಿಖೆಯಲ್ಲಿ ಕಂಡು ಬಂದರೆ ಬಿ ರಿಪೋರ್ಟ್ ಸಲ್ಲಿಸುತ್ತಾರೆ. ಇದಕ್ಕೆ ಆತಂಕ ಬೇಕಾಗಿಲ್ಲ ಎಂದು ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News