×
Ad

ವಿಜಯೇಂದ್ರ ಚಡ್ಡಿ ಹಾಕೋಕ್ಕಿಂತ ಮುಂಚೆ ನಾನು ಜಿಲ್ಲಾಧ್ಯಕ್ಷನಾಗಿದ್ದೆ: ಯತ್ನಾಳ್ ವಾಗ್ದಾಳಿ

Update: 2025-01-30 16:40 IST

ಯತ್ನಾಳ್/ವಿಜಯೇಂದ್ರ

ಬೆಂಗಳೂರು : ʼವಿಜಯೇಂದ್ರ ಚಡ್ಡಿ ಹಾಕೋಕ್ಕಿಂತ ಮುಂಚೆ ನಾನು ಜಿಲ್ಲಾಧ್ಯಕ್ಷನಾಗಿದ್ದೆ. ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ. ನಮ್ಮೆಲ್ಲರ ದುಡಿಮೆ ಇದೆ. ಅಲ್ಲದೆ, ವಿಜಯೇಂದ್ರನಿಂದ ನಾವು ಏನೂ ಕಲಿಯಬೇಕಾಗಿಲ್ಲʼ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತೀವ್ರ ವಾಗ್ದಾಳಿ ನಡೆಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼವಿಜಯೇಂದ್ರಗೆ ದುಡ್ಡಿನ ದುರಹಂಕಾರವಿದೆ. ರಾಜ್ಯ ಸರಕಾರವೂ ಸಹ ಅವರ ಜೊತೆಗೆ ಇರುವುದು ದುರ್ದೈವ. ಮುಡಾ ವಿಚಾರದಲ್ಲಿ ಮೈಸೂರಿಗೆ ಪಾದಯಾತ್ರೆ ತಲುಪುವುದರೊಳಗೆ ರಾಜೀನಾಮೆ ಕೊಡಬೇಕು ಎಂದು ವಿಜಯೇಂದ್ರ ಹೇಳಿದ್ದರು. ಆದರೆ, ವಿಜಯೇಂದ್ರ ಮೇಲಿರುವ ಆರೋಪ ಹೊರ ತೆಗೆದುಬಿಟ್ಟರೆ ಅವರ ಕಥೆ ಮುಗಿದೇ ಹೋಗುತ್ತದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼಅರುಣ್ ಸಿಂಗ್ ರಾಜ್ಯ  ಉಸ್ತುವಾರಿಯಾಗಿದ್ದಾಗ, ವಿಜಯೇಂದ್ರ ಅವರನ್ನು ಹೊಗಳಿ ಸಾಕಷ್ಟು ಅನುಕೂಲ ಮಾಡಿಕೊಟ್ಟರು. ಪಕ್ಷ ಕಟ್ಟಲು ಎಲ್ಲರ ಸಲಹೆ ಬೇಕು. ವಿಜಯೇದ್ರ ಅಪ್ಪನನ್ನು ಹೆದರಿಸಿರಬಹುದು. ಎಲ್ಲರನ್ನೂ ಹೆದರಿಸಲು ಆಗುವುದಿಲ್ಲʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News