×
Ad

ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ

Update: 2024-03-15 12:21 IST

Photo: PTI

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸುಮಾರು ಒಂದೂವರೆ ತಿಂಗಳು ಹಿಂದೆ ಒಬ್ಬ ತಾಯಿ ಮತ್ತು ಮಗಳು ಅವರನ್ನು ಕಾಣಲು ಬಂದಿದ್ದು ನಿಜ. ಅದಕ್ಕೂ ಮೊದಲು ಸಹ ಅವರಿಬ್ಬರು  ನನ್ನ ಮನೆ ಬಳಿ ಕಾಣಿದ್ದರು.  ಅವರು ಕಣ್ಣೀರು ಹಾಕುತ್ತಿದ್ದುದ್ದರಿಂದ ಒಳಗೆ ಕರೆಸಿ ವಿಚಾರಿಸಿದಾಗ ಅವರು ಹಲವಾರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಆಗಲೇ ನಗರ ಪೊಲೀಸ್ ಕಮೀಶನರ್ ಬಿ ದಯಾನಂದ ಅವರಿಗೆ ಪೋನ್ ಮಾಡಿ ಮಹಿಳೆ ಮತ್ತು ಆಕೆಯ ಮಗಳಿಗೆ ಸಹಾಯ ಮಾಡಿ ಎಂದು ಹೇಳಿದ್ದೆ ಎಂದು ತಿಳಿಸಿದರು.

ತುಂಬಾ ಕಷ್ಟದಲ್ಲಿರುವುದಾಗಿ ಹೇಳಿಕೊಂಡಿದ್ದರಿಂದ ಒಂದಷ್ಟು ದುಡ್ಡನ್ನು ಸಹ ತಾಯಿ-ಮಗಳಿಗೆ ಕೊಟ್ಟು ಕಳಿಸಿದ್ದೆ. ಈಗ ನೋಡಿದರೆ ಆಕೆ ತನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಕಾನೂನು ಅಡಿಯಲ್ಲಿ ಪ್ರಕರಣವನ್ನು ಎದುರಿಸುತ್ತೇನೆ. ಆದರೆ ಇದರಲ್ಲಿ ಯಾವುದೇ ರಾಜಕೀಯ ಕೈವಾಡ ಇಲ್ಲ ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News