‘ತಮ್ಮ ಕುಟುಂಬದ ಸಮಸ್ಯೆಯನ್ನು ಬಗೆಹರಿಸಿಕೊಡಿ’: ಸುರ್ಜೇವಾಲಗೆ ಯೋಗೇಶ್ವರ್ ಪುತ್ರಿ ದೂರು
ಬೆಂಗಳೂರು: ‘ತಮ್ಮ ಕುಟುಂಬದ ಸಮಸ್ಯೆಯನ್ನು ಬಗೆಹರಿಸಿಕೊಡಿ’ ಎಂದು ಮಾಜಿ ಸಚಿವ ಹಾಗೂ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ಹಾಗೂ ಪತ್ನಿ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ದೂರು ನೀಡಿದ್ದಾರೆ.
ಬುಧವಾರ ಇಲ್ಲಿನ ಕೆಪಿಸಿಸಿ ಕಚೇರಿಗೆ ಖುದ್ದು ಭೇಟಿ ಮಾಡಿದ ಯೋಗೇಶ್ವರ್ ಪುತ್ರಿ ನಿಶಾ ಹಾಗೂ ಮೊದಲನೆ ಪತ್ನಿ ಮಾಳವಿಕಾ ಸೋಲಂಕಿ ಅವರು, ನಮ್ಮ ತಂದೆ ಯೋಗೇಶ್ವರ್ ಅವರು ಅತ್ಯಂತ ಪ್ರಭಾವಶಾಲಿ. ಹೆಣ್ಣು ಮಕ್ಕಳಾದ ನಮಗೆ ಕಷ್ಟಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಕೋರ್ಟ್‍ನಲ್ಲಿಯೂ ಹೋರಾಟ ಮಾಡುತ್ತಿದ್ದೇವೆ. ಹೀಗಾಗಿ ನಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಕೋರಿದರು.
ಶಾಸಕ ಯೋಗೇಶ್ವರ್ ಪುತ್ರಿ ನಿಶಾ, ಪತ್ನಿ ಮಾಳವಿಕಾ ಸೋಲಂಕಿ ಅವರ ದೂರನ್ನು ಸಮಾಧಾನ ಚಿತ್ತರಾಗಿ ಆಲಿಸಿದ ರಣದೀಪ್ ಸಿಂಗ್ ಸುರ್ಜೇವಾಲ ಅವರು, ‘ನಿಮ್ಮ ಸಮಸ್ಯೆ ಬಗೆಹರಿಸಿಕೊಡಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.