×
Ad

ಗಾಂಜಾ ಮತ್ತಿನಲ್ಲಿ ತೇಲುತ್ತಿರುವ ಯುವತಿಯರ ವೀಡಿಯೊ ವೈರಲ್: ಮೈಸೂರಿನ ಎಚ್.ಡಿ ಕೋಟೆಯದ್ದು ಅಲ್ಲ!

Update: 2023-08-11 17:11 IST

ಮೈಸೂರು : ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಬಳಿ ಎಂಬ ಒಕ್ಕಣೆಯೊಂದಿಗೆ ಗಾಂಜಾ ಸೇವಿಸಿ ಮತ್ತಿನಲ್ಲಿ ತೇಲಾಡುತ್ತಿರುವ ಯುವತಿಯರ ಚಿತ್ರ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಮೈಸೂರು ಎಸ್ಪಿ ಸೀಮಾ ಲಾಟ್ಕರ್ ಸ್ಪಷ್ಟನೆ ನೀಡಿದ್ದಾರೆ. 

''ಇದು ನಡೆದಿರುವುದು ಮೈಸೂರಿನಲ್ಲಿ ಅಲ್ಲ. ಕೇರಳದ ವೈನಾಡು ಜಿಲ್ಲೆಯಲ್ಲಿ ಫೆ. 5ರಂದು ನಡೆದ ಘಟನೆ'' ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಇದು ಮೈಸೂರು ಜಿಲ್ಲೆಯಲ್ಲಿ ನಡೆದಿದ್ದು ಹಾಗೂ ಮೈಸೂರಿನ ಯುವತಿಯರು ಎಂಬ ಒಕ್ಕಣೆಯೊಂದಿಗೆ ಪೋಸ್ಟ್‌ಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ಪೊಲೀಸರು  ಈ ಬಗ್ಗೆ  ಸ್ಪಷ್ಟನೆ ನೀಡಿದ್ದಾರೆ. 



ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್  


ಎಸ್ಪಿ ಹೇಳಿದ್ದೇನು? 

''ಇದು ಹಳೆಯ ವಿಡಿಯೋವಾಗಿದ್ದು, ಫೆಬ್ರವರಿ 2023 ರಲ್ಲಿ ನಡೆದದ್ದಾಗಿರುತ್ತದೆ. ಈ ಸಂಬಂಧ ದಿನಾಂಕ.05.02.2023 ರಲ್ಲಿ ಕೇರಳದ ವೈನಾಡು ಜಿಲ್ಲೆಯ ಪುಲಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಮೈಸೂರು ಜಿಲ್ಲಾ ಪೊಲೀಸ್ ಘಟಕವು ಮಾದಕ ವಸ್ತುಗಳ ಸಾಗಾಟ & ಮಾರಾಟಗಳ ಮೇಲೆ ನಿಗಾ ವಹಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ , ಈ ಬಗ್ಗೆ ಯಾವುದೇ ಮಾಹಿತಿಗಳಿದ್ದಲ್ಲಿ ನಮಗೆ ನೇರವಾಗಿ ಮೆಸೇಜ್ ಮಾಡಬಹುದು''  ಎಂದು ಎಸ್ಪಿ ಸೀಮಾ ಲಾಟ್ಕರ್ ಹೇಳಿದ್ದಾರೆ. 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News