×
Ad

ಸುರತ್ಕಲ್: ಎಪಿಎಂಸಿ ಕೂಲಿ ಕಾರ್ಮಿಕ ನಿಗೂಢ ಸಾವು

Update: 2023-12-25 11:11 IST

ಸುರತ್ಕಲ್: ಇಲ್ಲಿನ‌ ಬೈಕಂಪಾಡಿಯ ಎಪಿಎಂಸಿಯಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಮೃತ‌ದೇಹ ಎಪಿಎಂಸಿ ಬಳಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಓಡಿಸಾ ರಾಜ್ಯದ ಜಾವಪುರ್ ಜಿಲ್ಲೆಯ ರಶ್ಮಿ ರಂಜನ್ (44) ಎಂದು ಗುರುತಿಸಲಾಗಿದೆ.

ಮೃತದೇಹದ ಬಲ‌ಕಾಲಿನ‌ ಮಂಡಿಯ ಕೆಳಭಾಗದಲ್ಲಿ ಲಘುವಾಹನ ಗುದ್ದಿದ ಗುರುತುಗಳಿದ್ದು, ಅಪಘಾತಕ್ಕೀಡಾಗಿ  ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸದ್ಯ ಸ್ಥಳಕ್ಕೆ ಪಣಂಬೂರು ಮತ್ತು ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News