×
Ad

ವೃತ್ತಿಯಲ್ಲಿ AI ಜೊತೆಗೆ ಕೆಲಸ ಮಾಡುತ್ತಿದ್ದವರಿಗೆ ʼAI ಬ್ರೈನ್ಫ್ರೈʼ ಸಮಸ್ಯೆ!

ಏನಿದು AI ಬ್ರೈನ್ಫ್ರೈ?

Update: 2026-03-10 15:45 IST

ಸಾಂದರ್ಭಿಕ ಚಿತ್ರ (AI)

ಕೃತಕ ಬುದ್ಧಿಮತ್ತೆ ಅಥವಾ AI ಸಾಧನಗಳ ಜೊತೆಗೆ ಕೆಲಸ ಮಾಡಿ ಸುಸ್ತಾಗಿರುವವರು ಇದೀಗ ಹೊಸ ಪದವೊಂದನ್ನು ಬಳಕೆಗೆ ತಂದಿದ್ದಾರೆ. ಅದೇ AI ಬ್ರೈನ್ಫ್ರೈ! ಏನಿದು AI ಬ್ರೈನ್ಫ್ರೈ?


ಕೃತಕಬುದ್ಧಿಮತ್ತೆ ಸಾಧನಗಳು ವೃತ್ತಿಜೀವನದ ಭಾಗವಾಗಿ ಪರಿಣಮಿಸಿವೆ. ಯಾವುದೇ ವೃತ್ತಿಯಾಗಿದ್ದರೂ AI ಸಾಧನಗಳ ಬಳಕೆ ಸಾಮಾನ್ಯವಾಗಿದೆ. ಕೋಡರ್ ಗಳಿಂದ ಪ್ರಾರಂಭಿಸಿ ಸಾಫ್ಟ್ವೇರ್ ಡೆವಲಪರ್ ಗಳವರೆಗೆ, ಲೆಕ್ಕಪರಿಶೋಧಕರಿಂದ ತೊಡಗಿ ಮಾರ್ಕೆಟ್ ವೃತ್ತಿಪರರವರೆಗೆ ಎಲ್ಲರೂ ಕ್ಲಾಡ್ ಕೋವರ್ಕ್ ಅಥವಾ ಕೋಡೆಕ್ಸ್ ಬಳಸುತ್ತಾರೆ. ಕೆಲವೊಮ್ಮೆ ಒಬ್ಬ ವ್ಯಕ್ತಿ ಅನೇಕ ಸಾಧನಗಳನ್ನು ಬಳಸುತ್ತಾರೆ. ಇದೀಗ ಹೊರನೋಟಕ್ಕೆ ನೋಡಿದರೆ ಉತ್ಪಾದಕತೆಗೆ ನೆರವಾಗುತ್ತದೆ. ಆದರೆ ದೀರ್ಘಕಾಲದಲ್ಲಿ ವ್ಯಕ್ತಿಗತವಾಗಿ ಋಣಾತ್ಮಕ ಪರಿಣಾಮ ಬೀರಲಿದೆ.

ಇದೀಗ AI ಬ್ರೈನ್ಫ್ರೈ ಕುರಿತಾಗಿ ಹೊಸ ಅಧ್ಯಯನ ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂನಲ್ಲಿ ಪ್ರಕಟವಾಗಿದೆ. ಸಂಶೋಧಕರು ಅಮೆರಿಕದ 1,488 ಕಾರ್ಮಿಕರನ್ನು ಸಮೀಕ್ಷೆ ನಡೆಸಿದ್ದಾರೆ. ವೃತ್ತಿಜೀವನದಲ್ಲಿ AI ಬಳಕೆ ಮತ್ತು ತಮ್ಮ ಮೇಲೆ ಆಗಿರುವ ಅದರ ಪರಿಣಾಮವನ್ನು ತಿಳಿಸುವಂತೆ ಕೇಳಿದ್ದಾರೆ. ಆಗ ತಿಳಿದು ಬಂದಿರುವ ಶಬ್ದ AI ಬ್ರೈನ್ಫ್ರೈ!

ಏನಿದು AI ಬ್ರೈನ್ಫ್ರೈ?

AI ಬ್ರೈನ್ಫ್ರೈ ಎಂದರೆ AI ಸಾಧನಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದ ಕಾರಣ ಉಂಟಾಗಿರುವ ಮಾನಸಿಕ ಆಯಾಸ. ಸಂಶೋಧಕರು ಕಂಡುಕಂಡಿರುವ ಪ್ರಕಾರ ಅನೇಕ ವೃತ್ತಿಪರರು ತಮ್ಮ ಅರಿವಿನ ಮಿತಿಯನ್ನು ಮೀರಿ ಏನಿದು AI ಸಾಧನಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅದೇ ಕಾರಣದಿಂದ AI ಬ್ರೈನ್ಫ್ರೈಯಂತಹ ಪರಿಸ್ಥಿತಿ ಉಂಟಾಗಿದೆ.

ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇ 14ರಷ್ಟು ಮಂದಿ AI ಬಳಕೆಯಿಂದಾಗಿ ನಿರ್ದಿಷ್ಟ ಅರಿವಿನ ಆಯಾಸ ಅನುಭವಿಸಿರುವುದನ್ನು ತಿಳಿಸಿದ್ದಾರೆ. ಅಧ್ಯಯನದಲ್ಲಿ ಭಾಗವಹಿಸುವವರು ಬಝಿಂಗ್ ಅಥವಾ ಕಂಪನದ ಅನುಭವ (ಸಾಮಾನ್ಯವಾಗಿ ನರಗಳ ಕಿರಿಕಿರಿ, ಸ್ನಾಯು ಸೆಳೆತ ಅಥವಾ ಅಡ್ರಿನಾಲಿನ್ ಅನ್ನು ಪ್ರಚೋದಿಸುವ ಹೆಚ್ಚಿದ ಒತ್ತಡ/ಆತಂಕದಿಂದ ಉಂಟಾಗುತ್ತದೆ) ಅಥವಾ ಮಾನಸಿಕ ಮಂಜು ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಅಂದರೆ ಗಮನ ಕೇಂದ್ರೀಕರಿಸುವುದರಲ್ಲಿ ತೊಂದರೆ, ನಿರ್ಧಾರ ಕೈಗೊಳ್ಳುವುದು ನಿಧಾನವಾಗಿರುವುದು ಮತ್ತು ತಲೆನೋವಿನ ಅನುಭವವಾಗಿರುವುದಾಗಿ ಹೇಳಿದ್ದಾರೆ.

ಇದಕ್ಕೆ ಮೊದಲು ಇನ್ನೊಂದು ಅಧ್ಯಯನದಲ್ಲಿ AI ಜನರನ್ನು ಹೆಚ್ಚು ಕೆಲಸ ಮಾಡುವಂತೆ ಪ್ರೇರೇಪಿಸುತ್ತಿದೆ ಎನ್ನುವುದು ಪತ್ತೆಯಾಗಿತ್ತು. ಕೆಲವರು ತಮ್ಮ ವಿರಾಮದ ಸಮಯದಲ್ಲೂ AI ಗೆ ಪ್ರಾಂಪ್ಟ್ಗಳನ್ನು ನೀಡಿ ಹೆಚ್ಚಿನ ಕೆಲಸವನ್ನು ಮಾಡುತ್ತಿದ್ದಾರೆ.

AI ಬ್ರೈನ್ಫ್ರೈ ಎಂದರೆ ಸುಸ್ತಾದ ಅನುಭವವೆ?

ಸಾಂಪ್ರದಾಯಿಕ ಆಯಾಸಕ್ಕೂ AI ಸಾಧನದ ಬಳಕೆಯಿಂದಾದ ಆಯಾಸಕ್ಕೂ ವ್ಯತ್ಯಾಸವಿದೆ. ಸಾಮಾನ್ಯವಾಗಿ ನಮಗೆ ಭಾವನಾತ್ಮಕ ಅಥವಾ ಕೆಲಸದ ಕುರಿತ ನಕಾರಾತ್ಮಕ ಅನುಭವ ಮೂಡುವಂತೆ ಆಯಾಸವಾಗುತ್ತದೆ. ಆದರೆ AI ಬ್ರೈನ್ಫ್ರೈನಲ್ಲಿ AI ನ ಅನೇಕ ಸಿಸ್ಟಂಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ನಿರ್ವಹಣೆಯಲ್ಲಿ ತೊಂದರೆಯಾಗುವುದು ಆಗಿರುತ್ತದೆ.

ಈ AI ಬ್ರೈನ್ಫ್ರೈ ಹೆಚ್ಚು ನಿರ್ದಿಷ್ಟವಾಗಿರುತ್ತದೆ. ಅಂದರೆ ಸಾಮಾನ್ಯವಾದ ಮಾನಸಿಕ ಆಯಾಸದ ಸಮೀಕ್ಷೆಗಳಲ್ಲಿ AI ಬ್ರೈನ್ಫ್ರೈ ಹೆಚ್ಚು ಕಂಡುಬರದೆ ಇರಬಹುದು.

AI ಬ್ರೈನ್ಫ್ರೈನಿಂದ ಹೆಚ್ಚು ತಾಪ ಯಾರಿಗೆ?

ಅನೇಕ AI ಸಾಧನಗಳನ್ನು ಬಳಸುವ ಎಲ್ಲಾ ವೃತ್ತಿಪರರು ಇಂತಹ AI ಬ್ರೈನ್ಫ್ರೈ ಅನುಭವಿಸುತ್ತಿಲ್ಲ. ಮಾರ್ಕೆಟಿಂಗ್ ವೃತ್ತಿಪರರಲ್ಲಿ ಅತ್ಯಧಿಕ ಶೇ 26ರಷ್ಟು AI ಬ್ರೈನ್ಫ್ರೈ ಕಂಡುಬಂದಿದೆ. ಮಾನವ ಸಂಪನ್ಮೂಲದಲ್ಲಿ ಶೇ 19.3ರಷ್ಟು ಮತ್ತು ಆಪರೇಶನ್ಸ್ ವಿಭಾಗದಲ್ಲಿ ಶೇ 17.9ರಷ್ಟು AI ಬ್ರೈನ್ಫ್ರೈ ಕಂಡುಬಂದಿದೆ.

ನಂತರದ ಸ್ಥಾನದಲ್ಲಿ ಸಾಫ್ಟ್ವೇರ್ ಡೆವಲಪರ್ಗಳಿದ್ದು ಶೇ 17.8ರಷ್ಟು AI ಬ್ರೈನ್ಫ್ರೈ ಅನುಭವಿಸಿದ್ದಾರೆ. ಕಾನೂನು ವೃತ್ತಿಪರರು ಶೇ 5.6ರಷ್ಟು ಮತ್ತು ನಾಯಕತ್ವ ಮತ್ತು ಉತ್ಪನ್ನ ಮ್ಯಾನೇಜ್ಮೆಂಟ್ ಉದ್ಯೋಗದಲ್ಲಿರುವವರು ಶೇ 8.6ರಷ್ಟು AI ಬ್ರೈನ್ಫ್ರೈ ಎದುರಿಸಿದ್ದಾರೆ.

ಅತ್ಯಧಿಕ AI ಬ್ರೈನ್ಫ್ರೈ ಅನುಭವಿಸಿದ ವೃತ್ತಿಪರರು ಕಡಿಮೆ AI ಬ್ರೈನ್ಫ್ರೈ ಅನುಭವಿಸಿದವರಿಗೆ ಹೋಲಿಸಿದರೆ ಶೇ 14ರಷ್ಟು ಹೆಚ್ಚು ಮಾನಸಿಕ ಪ್ರಯತ್ನ ಹಾಕಿರುವುದಲ್ಲದೆ, ಶೇ 12ರಷ್ಟು ಮಾನಸಿಕ ಆಯಾಸ ಅನುಭವಿಸಿದ್ದಾರೆ.

AI ಬ್ರೈನ್ಫ್ರೈನಿಂದ ಉದ್ಯೋಗ ತೊರೆಯುವ ಸಾಧ್ಯತೆ

AI ಬ್ರೈನ್ಫ್ರೈನ ಔದ್ಯಮಿಕ ನಷ್ಟವೂ ತೀವ್ರವಾಗಿರಲಿದೆ. AI ಬ್ರೈನ್ಫ್ರೈ ಎದುರಿಸುತ್ತಿರುವ ಶೇ 33ರಷ್ಟು ಮಂದಿ ನಿರ್ಧಾರ ಕೈಗೊಳ್ಳಲು ಆಯಾಸವಾಗುತ್ತಿರುವುದನ್ನು ತಿಳಿಸಿದ್ದಾರೆ. ಹೀಗಾಗಿ ದೋಷಗಳು ಮತ್ತು ತಪ್ಪು ನಿರ್ಧಾರಗಳ ಸಾಧ್ಯತೆ ಹೆಚ್ಚಾಗಲಿದೆ. ಸಂಶೋಧನೆ ಕಂಡುಕೊಂಡಿರುವ ಪ್ರಕಾರ AI ಬ್ರೈನ್ಫ್ರೈನಿಂದ ಪರಿಣಾಮವಾಗಿರುವ ಶೇ 11ರಷ್ಟು ಹೆಚ್ಚು ಸಣ್ಣ ತಪ್ಪುಗಳು ಮತ್ತು ಶೇ 39ರಷ್ಟು ಹೆಚ್ಚು ಮುಖ್ಯ ತಪ್ಪುಗಳನ್ನು ಮಾಡಿದ್ದಾರೆ. ಮಾತ್ರವಲ್ಲದೆ, AI ಬ್ರೈನ್ಫ್ರೈ ಅಧಿಕ ಅನುಭವಿಸುವವರು ಕಡಿಮೆ ಅನುಭವಿಸಿದವರಿಗೆ ಹೋಲಿಸಿದರೆ ಕೆಲಸ ತೊರೆಯುವ ಸಾಧ್ಯತೆ ಶೇ 39ರಷ್ಟಿದೆ ಎಂದು ಸಂಶೋಧನೆ ಹೇಳಿದೆ.

ಇಂತಹ ಸವಾಲುಗಳ ಹೊರತಾಗಿಯೂ ಎಲ್ಲಾ AI ಬಳಕೆದಾರರು ನಕಾರಾತ್ಮಕ ಫಲಿತಾಂಶವನ್ನು ತಿಳಿಸಿಲ್ಲ. ಅಧ್ಯಯನ ಹೇಳಿರುವ ಪ್ರಕಾರ AI ನಿಂದಾಗಿ ಒಂದೇ ಕೆಲಸವನ್ನು ಪದೇಪದೆ ಮಾಡಬೇಕಾಗಿದ್ದವರು ಅಥವಾ ತೃಪ್ತಿಯಿಲ್ಲದ ಕೆಲಸ ಮಾಡುತ್ತಿದ್ದವರಲ್ಲಿ AI ಬಳಕೆಯಿಂದಾಗಿ ಆಗಿರುವ AI ಬ್ರೈನ್ಫ್ರೈ ಶೇ 15ರಷ್ಟು ಕಡಿಮೆ ಇದೆ. ಅಂತಹ ವೃತ್ತಿಪರರು ಇನ್ನಷ್ಟು ಚೆನ್ನಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಸಕಾರಾತ್ಮಕ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿದೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News